ಅರಂಬೂರು ಇಡ್ಯಡ್ಕ ಸರಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಅರಂಬೂರು ಇಡ್ಯಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆ.15 ರಂದು ಆಚರಿಸಲಾಯಿತು.
ಎಸ್.ಡಿ.ಎಂ.ಸಿ.ಅಧ್ಯಕ್ಷ ರಮೇಶ್ ಕೆ.ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಸಮಾರಂಭವನ್ನು ದಿವಾಕರ ನಾಯಕ್ ಸರಳಿಕುಂಜ ರವರು ಉದ್ಘಾಟಿಸಿದರು. ‌

ವೇದಿಕೆಯಲ್ಲಿ ಆಲೆಟ್ಟಿ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು, ರತೀಶನ್ ಅರಂಬೂರು, ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ರೈ ಅರಂಬೂರು, ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಫಯಾಜ್,

ಮಹಿಳಾ ಮಂಡಳಿ ಅಧ್ಯಕ್ಷೆ ಅಮಿತ ರೈ, ನಿವೃತ್ತ ಶಿಕ್ಷಕ ರಾಮಕೃಷ್ಣ, ಸಿ.ಆರ್.ಪಿ ರೇಖಾ ಶೇಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವರ್ಗಾವಣೆಯಾದ ಶಿಕ್ಷಕಿ ಗೀತಾ ಕುಮಾರಿ ಯವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಕಲಾವತಿ ವಂದಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಧನಂಜಯ ಮೇರ್ಕಜೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.