ನಾಮ್ ಧಾರಿ ಸೀಡ್ಸ್ ಹಿರಿಯ ಉಪಾಧ್ಯಕ್ಷ ಎಂ.ಎಸ್.ಸುಬ್ರಹ್ಮಣ್ಯರಿಗೆ ರಫ್ತು ಶ್ರೇಷ್ಠತಾ ಪ್ರಶಸ್ತಿ

0

ನಾಮ್ ಧಾರಿ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ನ ಹಿರಿಯ ಉಪಾಧ್ಯಕ್ಷರಾದ ಎಂ.ಎಸ್.ಸುಬ್ರಹ್ಮಣ್ಯ ಮದುವೆಗದ್ದೆಯವರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಕೊಡಮಾಡುವ ರಫ್ತು ಶ್ರೇಷ್ಠತಾ ( ಎಕ್ಸ್ ಪೋರ್ಟ್ ಎಕ್ಸಲೆನ್ಸ್ ) ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಆ.19 ರಂದು ದಾವಣಗೆರೆಯಲ್ಲಿ ನಡೆದ ಫೆಡರೇಶನ್ ಸಭೆಯಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಶಾಸಕ ಶಾಮನೂರು ಶಿವಶಂಕರಪ್ಪ, ಎಫ್.ಕೆ.ಸಿ.ಸಿ.ಐ. ಅಧ್ಯಕ್ಷ ಗೋಪಾಲ ರೆಡ್ಡಿ, ಎಕ್ಸ್ ಪೋರ್ಟ್ ಎಕ್ಸಲೆನ್ಸ್ ಅವಾರ್ಡ್ ಚೇರ್ ಪರ್ಸನ್ ಶ್ರೀಮತಿ ಉಮಾ ರೆಡ್ಡಿ ಮೊದಲಾದವರ ಉಪಸ್ಥಿತಿಯಲ್ಲಿ ಎಂ.ಎಸ್.ಸುಬ್ರಹ್ಮಣ್ಯರಿಗೆ ಪ್ರಶಸ್ತಿ ಪ್ರದಾನಿಸಲಾಯಿತು.


ನಾಮ್ ಧಾರಿ ಸೀಡ್ಸ್ ಸಂಸ್ಥೆಯು ವಿಶ್ವದಾದ್ಯಂತ ಅತ್ಯುತ್ತಮ ದರ್ಜೆಯ ಸೀಡ್ಸ್ ಗಳನ್ನು
ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಸರಬರಾಜು ಮಾಡುವುದರೊಂದಿಗೆ ಲಕ್ಷಾಂತರ ರೈತರಿಗೆ ಉದ್ಯೋಗಾವಕಾಶ ಸೃಷ್ಠಿಸಿದೆ. ವಿದೇಶಿ ವಿನಿಮಯ ಗಳಿಕೆಯಲ್ಲಿಯೂ ಸಂಸ್ಥೆ ‌ದೇಶಕ್ಕೆ ಮಹತ್ವದ ಕೊಡುಗೆ ನೀಡಿದೆ. ಈ ಎಲ್ಲ ಹಿನ್ನಲೆಯಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರು ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಎಂ.ಎಸ್.ಸುಬ್ರಹ್ಮಣ್ಯರವರು ಸುಳ್ಯ ತಾಲೂಕು ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಶೇಷಪ್ಪ ಮಾಸ್ತರ್ ರವರ ಪುತ್ರ.