ಸುಬ್ರಹ್ಮಣ್ಯದ ಕೌಶಿಕ್ ಕಕ್ಕೆ ಪದವು ಷಟಲ್ ಬ್ಯಾಡ್ಮಿಂಟನ್ ನಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ

0

ಕೌಶಿಕ್ ಕಕ್ಕೆ ಪದವು ಅವರು ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿ, ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರು ಸುಬ್ರಹ್ಮಣ್ಯದ ಡಾlರವಿ ಕಕ್ಕೆಪದವು ಹಾಗೂ ಗೀತಾ ದಂಪತಿಗಳ ಪುತ್ರ.

ಪುತ್ತೂರಿನ ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಕುಮಾರಸ್ವಾಮಿ ವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾಗಿದ್ದು ಈ ಹಿಂದೆಯೂ ಷಟಲ್ ನಲ್ಲಿ ಹಲವು ಪ್ರಶಸ್ತಿ ಪಡಕೊಂಡವರು, ಕುಕ್ಕೆ ಬ್ಯಾಡ್ಮಿಂಟನ್ ಅಕಾಡೆಮಿಯ ಸದಸ್ಯರಾಗಿದ್ದಾರೆ.