ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಇದರ ವತಿಯಿಂದ ನಡೆದ ಆ.27 ರಂದು ಮೈಸೂರು ವಿಭಾಗ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ 9 ರಿಂದ 14ನೇ ವಯೋಮಾನದ ಟ್ರೆಡಿಷನಲ್ ಬಾಲಕಿಯರ ವಿಭಾಗದಲ್ಲಿ ಸೋನಾ ಅಡ್ಕಾರ್ ಪ್ರಥಮ,

ಹಾರ್ದಿಕ ಕೆರೆಕ್ಕೊಡಿ ದ್ವಿತೀಯ, ಅವನಿ ಎಂ ಎಸ್ ಗೌಡ ಐದನೇ ಸ್ಥಾನ, ಹಾಗೂ ಆರ್ಟಿಸ್ಟಿಕ್ ಸಿಂಗಲ್ ವಿಭಾಗದಲ್ಲಿ ಹಾರ್ದಿಕ ಕೆರೆಕ್ಕೊಡಿ ಪ್ರಥಮ, ಸೋನಾ ಅಡ್ಕಾರ್ ಚತುರ್ಥ ಸ್ಥಾನ,9 ರಿಂದ 14ನೇ ವಯೋಮಾನದ ಬಾಲಕರ ಟ್ರೆಡಿಷನಲ್ ವಿಭಾಗದಲ್ಲಿ ಮೋನಿಶ್ ತಂಟೆಪ್ಪಾಡಿ ಪ್ರಥಮ,















ತನುಷ್ ಎಂ ಹೆಚ್ ದ್ವಿತೀಯ ಹಾಗೂ ತನುಷ್ ಕೆ ಆರ್ ಚತುರ್ಥ ಸ್ಥಾನವನ್ನು ಪಡೆದು ಅಕ್ಟೋಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಯೋಗೇನ ಚಿತ್ತಸ್ಯ ಕೇಂದ್ರದ ವಿದ್ಯಾರ್ಥಿಗಳು, ಯೋಗಗುರು ಸಂತೋಷ್ ಮುಂಡಕಜೆ ಯವರ ಶಿಷ್ಯ ರಾಗಿರುತ್ತಾರೆ.









