ಕೊಲ್ಲಮೊಗ್ರು ಗ್ರಾ.ಪಂ‌: ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ

0

ಕರ್ನಾಟಕ ಸರಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮ ಇಂದು ರಾಜ್ಯದಾದ್ಯಂತ ಅನುಷ್ಠಾನಗೊಳ್ಳಲಿರುವ ಹಿನ್ನೆಲೆಯಲ್ಲಿ ಕೊಲ್ಲಮೊಗ್ರು ಗ್ರಾ.ಪಂ. ನ ವತಿಯಿಂದ ಮಯೂರ ಕಲಾ ಮಂದಿರದ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಪ್ರೋಜೆಕ್ಟರ್ ಮುಖಾಂತರ ನೋಡುವ ವ್ಯವಸ್ಥೆ ಮಾಡಲಾಗಿತ್ತು.

ನೋಡಲ್ ಅಧಿಕಾರಿಯಾಗಿದ್ದ ಸಿ.ಡಿ.ಪಿ.ಒ ಕಛೇರಿಯ ವಲಯ ಮೇಲ್ವಿಚಾರಕಿ ದೀಪಿಕಾ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ ಅಧ್ಯಕ್ಷ ಜಯಶ್ರೀ ಚಾಂತಾಳ, ಗ್ರಾ.ಪಂ ಸದಸ್ಯರಾದ ಪುಷ್ಪರಾಜ್ ಪಡ್ಪು, ಮೋಹಿನಿ ಕಟ್ಟ ಉಪಸ್ಥಿತರಿದ್ದರು.

ಪಿಡಿಒ ರವಿಚಂದ್ರವರು ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಂಜೀವಿನಿ ಒಕ್ಕೂಟದ MBK,LCRP ಹಾಗೂ ನೂರಾರು ಮಂದಿ ಫಲಾನುಭವಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.