ಸುಳ್ಯ ಉದ್ಯಾನವನ ಆಸ್ಪತ್ರೆಯಲ್ಲಿ ಸೀನಿಯರ್ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ಕೆ.ಬಾಲಕೃಷ್ಣ ರಾವ್ ನಿವೃತ್ತಿ

0


ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಐವರ್ನಾಡು ರಬ್ಬರ್ ವಿಭಾಗದ ಅಧೀನದಲ್ಲಿರುವ ಸುಳ್ಯ ಉದ್ಯಾನವನ ಆಸ್ಪತ್ರೆಯಲ್ಲಿ ಸೀನಿಯರ್ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ಕೆ.ಬಾಲಕೃಷ್ಣ ರಾವ್ ಆ.31ರಂದು ನಿವೃತ್ತಿ ಹೊಂದಿದ್ದಾರೆ.


1989 ಸೇವೆಗೆ ಸೇರಿದ ಅವರು 34 ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಉದ್ಯಾನವನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಮೂಲತಃ ಕುಂದಾಪುರದ ಕೋಟೇಶ್ವರದವರಾದ ಅವರು ಸುಳ್ಯ ಕೆ.ಎಫ್.ಡಿ.ಸಿ.ವಸತಿಗೃಹದಲ್ಲಿ ನೆಲೆಸಿದ್ದರು. ಇವರ ಪತ್ನಿ ತಾರಾ ರಾವ್ ಕೆ.ಗೃಹಿಣಿಯಾಗಿದ್ದು, ಪುತ್ರ ಸನತ್ ರಾವ್ ಕೆ. ಎಂ.ಟೆಕ್ ಇಂಜಿನಿಯರ್ ಮಾಡಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ.