ಕಳಂಜದ ಅನಿತಾ‌‌ ಬೀಡಿ ಏಜೆಂಟ್ ಹಂಝ ಕಳಂಜ ನಿಧನ

0

ಅನಿತಾ ಬೀಡಿ ಏಜೆಂಟರಾಗಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕಳಂಜ ಗ್ರಾಮದ ಹಂಝ ಕಳಂಜರವರು ಹೃದಯಾಘಾತದಿಂದ ಸೆ. 1ರಂದು ನಿಧನರಾದರು. ಇವರಿಗೆ 62 ವರ್ಷ ವಯಸ್ಸಾಗಿತ್ತು. ಇವರು ಕಳಂಜ ಬುಖಾರಿಯಾ ಜುಮ್ಮಾ ಮಸೀದಿಯಲ್ಲಿ ಖಜಾಂಜಿಯಾಗಿದ್ದರು. ಮೃತರು ಪತ್ನಿ ಶ್ರೀಮತಿ ಅಮೀನಾ ಪುತ್ರರಾದ ಅಬ್ದುಲ್ ಗಫೂರ್, ನಜೀರ್, ಪುತ್ರಿಯರಾದ ನಸೀಮ, ಫರೀದ, ಸುಮಯ್ಯ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.