ಲಯನ್ಸ್ ಕ್ಲಬ್ ಗುತ್ತಿಗಾರು ವತಿಯಿಂದ ಶಿಕ್ಷಕರ ದಿನಾಚರಣೆ

0

ಲಯನ್ಸ್ ಕ್ಲಬ್ ಗುತ್ತಿಗಾರು ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಸೆ.4 ರಂದು ಆಚರಿಸಲಾಯಿತು.

ಗುತ್ತಿಗಾರಿನವರಾಗಿದ್ದು ಪ್ರಸಕ್ತ ಮೂಡಬಿದಿರೆಯಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ಶಿಕ್ಷಕರಾದ ತುಕ್ರಪ್ಪ ಕೆಂಬಾರೆ ಹಾಗೂ
ಪತ್ನಿ ಸವಿತಾ ಟಿ ಎನ್ ಕೆಂಬಾರೆ ದಂಪತಿಗಳನ್ನು ಶಾಲು, ಹಾರ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ಕಡ್ಲಾರು ವಹಿಸಿದ್ದರು.
ಶಿಕ್ಷಕರ ದಿನಾಚರಣೆಯ ಮಹತ್ವದ ಕುರಿತು ವೆಂಕಪ್ಪ ಕೇನಾಜೆ ಮಾತನಾಡಿದರು. ವೇದಿಕೆಯಲ್ಲಿ ಲಯನ್ಸ್ ವಲಯಾ ಧ್ಯಕ್ಷ ಲಯನ್ ಲಿಜೋ ಜೋಸ್ ನಿತ್ಯಾನಂದ ಮುಂಡೋಡಿ, ಎಂ.ಡಿ ವಿಜಯಕುಮಾರ್, ಮೋಹನ್ ಕೆ ಉಪಸ್ಥಿತರಿದ್ದರು.
ಈ ಸಂದರ್ಭ ಗುತ್ತಿಗಾರು ಲಯನ್ಸ್ ಕ್ಲಬ್ ನ ಶಿಕ್ಷಕ ಸದಸ್ಯರಾದ ವೆಂಕಪ್ಪ ಕೇನಾಜೆ, ಜಯರಾಮ ಕಡ್ಲಾರ್, ಕುಶಾಲಪ್ಪ ಟಿ ಇವರುಗಳಿಗೂ ಗೌರವ ಸಲ್ಲಿಸಲಾಯಿತು.