ಮುರುಳ್ಯ ಹಾಲು ಸೊಸೈಟಿ ಸದಸ್ಯೆ ಶ್ರೀಮತಿ ಸುಂದರಿರವರಿಗೆ ತಾಲೂಕಿನ ಉತ್ತಮ ಹೈನುಗಾರ ಪ್ರಶಸ್ತಿ

0

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ ವಾರ್ಷಿಕ ಮಹಾಸಭೆಯು ಮಂಗಳೂರಿನಲ್ಲಿ ಸೆ.5 ರಂದು ನಡೆದಿದ್ದು, ಈ ಸಂದರ್ಭದಲ್ಲಿ ಮುರುಳ್ಯ ಹಾಲು ಉತ್ಪಾದಕರ ಸಂಘದ ಸದಸ್ಯೆ ಶ್ರೀಮತಿ ಸುಂದರಿಯವರಿಗೆ 2022-23 ನೇ ಸಾಲಿನ ಸುಳ್ಯ ತಾಲೂಕಿನ ಮಧ್ಯಮ ವರ್ಗದ ಉತ್ತಮ ಹೈನುಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ಕಾರ್ಯದರ್ಶಿ ಅಕ್ಷತಾ ರವರ ಮಾಹಿತಿಯಂತೆ ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಡಾ. ಸತೀಶ್ ರಾವ್ ಮತ್ತು ವಿಸ್ತರಣಾಧಿಕಾರಿ ಹರೀಶ್ ಕುಮಾರ್ ರವರು ಸುಂದರಿಯವರ ಮನೆಯಲ್ಲಿ ಸಮೀಕ್ಷೆ ನಡೆಸಿ ಒಕ್ಕೂಟಕ್ಕೆ ಅವರ ಹೆಸರನ್ನು ಶಿಫಾರಸು ಮಾಡಿದ್ದರು.
ಈ ಸಂದರ್ಭದಲ್ಲಿ ಮುರುಳ್ಯ ಹಾಲು ಸೊಸೈಟಿ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಊರು ಸಾಗು ಉಪಸ್ಥಿತರಿದ್ದರು.