ಪೆರುವಾಜೆ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಭೋಜನ ಶಾಲೆಯ ಉದ್ಘಾಟನೆ

0

ತಾಲೂಕಿಗೆ ಮಾದರಿಯಾಗಿರುವ , ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸ.ಹಿ.ಪ್ರಾ.ಶಾಲೆ‌ ಪೆರುವಾಜೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಭೋಜನಶಾಲೆಯ ಉದ್ಘಾಟನಾ ಕಾರ್ಯಕ್ರಮ ಸೆ.07ರಂದು ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಇವರು ನೂತನ ಭೋಜನ ಶಾಲೆಯ ಉದ್ಘಾಟನೆ ಮಾಡಿದರು . ಗ್ರಾ.ಪಂ. ಸದಸ್ಯರಾಗಿರುವ ಪದ್ಮನಾಭ ಶೆಟ್ಟಿ ಹಾಗೂ ಸಚಿನ್ ರಾಜ್ ಶೆಟ್ಟಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್ , ಸಹ ಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿಜಯ ಕುಮಾರ್, ಉಪಾಧ್ಯಕ್ಷೆಯಾದ ಶ್ರೀಮತಿ ಪೂರ್ಣಿಮಾ ಉಮೇಶ್, ಶಿಕ್ಷಕ ವೃಂದ, ವಿದ್ಯಾರ್ಥಿಗಳು ,ಎಸ್. ಡಿ.ಎಂ.ಸಿ ಸದಸ್ಯರು ಪೋಷಕರು ,ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಲಾ ಪೋಷಕರಾದ ಬೆನೆಡಿಕ್ ಡಿಸೋಜ ರವರು ಭೋಜನ ವ್ಯವಸ್ಥೆ ಮಾಡಿದರು.