ಜಾಹೀರಾತು ಅಂಬಾಸಿಡರ್ ಆಗಿ ಮಿಂಚಲಿದ್ದಾಳೆ ಸುಳ್ಯದ ಪುಟಾಣಿ ಚಾನ್ವಿ

0

ಬೆಂಗಳೂರಿನ ಲೈಮ್ ಸ್ಕ್ರೀನ್ ಜಾಹೀರಾತು ಸಂಸ್ಥೆಗೆ ಸುಳ್ಯದ ಪುಟಾಣಿ ಚಾನ್ವಿ ಆಯ್ಕೆಯಾಗಿದ್ದಾಳೆ.

ಅ. 15 ರಂದು ಮುಂಬೈ ನಲ್ಲಿ ನಡೆಯಲಿರುವ ಯುಟ್ಯೂಬ್ ಜಾಹಿರಾತಿನಲ್ಲಿ ಭಾಗವಹಿಸಲಿದ್ದಾಳೆ.

ಅಲ್ಲದೆ ಬೇರೆ ಬೇರೆ ಆಪ್ ನ ಮಕ್ಕಳ ವಿಭಾಗದ ಜಾಹೀರಾತುಗಳಲ್ಲಿ ಅವಕಾಶ ಸಿಗಲಿದೆ.

ಇದು ಆನ್ಲೈನ್ ಶಾಪ್ ಆಪ್ ನ ಜಾಹೀರಾತು ಮಾಡೆಲ್ ಗಳ ವೇದಿಕೆಯಾಗಿದ್ದು, ಇದರಲ್ಲಿ ಆಯ್ಕೆಯಾದ ನಂತರ ಫೋಟೋಶೂಟ್ ನಡೆಸಿ ಅಮೆಜಾನ್, ಕಲರ್ಸ್, ಮೀಶೋ ಇನ್ನಿತರ ಹೆಸರಾಂತ ಆಪ್ ಗಳ ಮೂಲಕ ಬಟ್ಟೆಗಳ ಅಥವಾ ಇನ್ನಿತರ ವಸ್ತುಗಳ ಮಾಡೆಲ್ ಆಗಿ ಹೊರಹೊಮ್ಮಲಿದ್ದಾಳೆ.

ನಾವೂರಿನ ದಿ. ಧನಂಜಯ ಟೈಲರ್ ರವರ ಪುತ್ರಿ ಶ್ರೀಮತಿ ಚಾಂದಿನಿ ಪುರುಷೋತ್ತಮ ರವರ ಮಗಳಾಗಿರುವ ಚಾನ್ವಿ
ಸಿ. ಪಿ, ರೋಟರಿ ಶಾಲೆಯ ಎಲ್.ಕೆ.ಜಿ. ವಿದ್ಯಾರ್ಥಿನಿ.

ಆಡಿಶನ್ ಫೋಟೋಗ್ರಾಫರ್ ಆಗಿ ಶ್ರೀದೇವಿ ಸ್ಟುಡಿಯೋದ ಸತೀಶ್ ರವರು ಸಹಕರಿಸಿದ್ದರು.

ಈಕೆ ದಿ ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋದ ಅಭಿ ಕುಲಾಲ್ ರವರಲ್ಲಿ ಡಾನ್ಸ್ ಅಭ್ಯಾಸ ಮಾಡುತ್ತಿದ್ದಾಳೆ. ಅಲ್ಲದೆ ನಾಗರಾಜ ಕುಲಾಲ್ ಪೆರ್ಲoಪಾಡಿ ಯವರಲ್ಲಿ ಸುಗಮ ಸಂಗೀತ ತರಬೇತಿಯನ್ನು ಪಡೆಯುತ್ತಿದ್ದಾಳೆ.