ಪಂಬೆತ್ತಾಡಿ ಶಾಲಾ ಶಿಕ್ಷಕಿ ಶ್ರೀಮತಿ ಭವ್ಯರವರಿಗೆ ನೇಷನ್ ಬಿಲ್ಡರ್ ಅವಾರ್ಡ್

0

ಬೆಳ್ಳಾರೆ ರೋಟರಿಕ್ಲಬ್ ಟೌನ್ ವತಿಯಿಂದ ನೇಷನ್ ಬಿಲ್ಡರ್ ಅವಾರ್ಡ್ ನ್ನು ಪಂಬೆತ್ತಾಡಿ ಹಿ.ಪ್ರಾ ಶಾಲೆಯ ಶಿಕ್ಷಕಿ ಶ್ರೀಮತಿ ಭವ್ಯ, ಬಿ, ಇವರಿಗೆ ನೀಡಿ ಗೌರವಿಸಲಾಯಿತು. ಸೆ.೦೭ ರಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷರಾದ ಬಿ.ಕೆ. ಶಶಿಧರ್ ಇವರು ಅಧ್ಯಕ್ಷತೆ ವಹಿಸಿದ್ದರು.

ರೊ| ಎ.ಕೆ. ಮಣಿಯಾಣಿ , ರೊ | ಪದ್ಮನಾಭ ಬೀಡು, ರೊ| ರವಿಂದ್ರ ಗೌಡ,ರೊ| ಬಾಲಕೃಷ್ಣ ಮಡ್ತಿಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಸ್. ಡಿ ಎಂ ಸಿ ಅಧ್ಯಕ್ಷರು. ಸದಸ್ಯರು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.