ಜ್ಞಾನದೀಪ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟಕ್ಕೆ

0

ವಿದ್ಯಾಭಾರತಿಯ ಕಬಡ್ಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಜ್ಞಾನದೀಪ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ತೃಷಾ ಮಡಪ್ಪಾಡಿ ಹಾಗೂ ಲಕ್ಷ್ಯ ಕಡಪಳ ಇವರು ರಾಜ್ಯಮಟ್ಟದ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಗಳಿಸಿ, ತೆಲಂಗಾಣದ ಹೈದರಾಬಾದ್ ನಲ್ಲಿ ನಡೆದ ದಕ್ಷಿಣ ಮಧ್ಯ ಕ್ಷೇತ್ರ ಕಬಡ್ಡಿಯಲ್ಲಿಯೂ ತೆಲಂಗಾಣ ತಂಡವನ್ನು ಮಣಿಸಿ ರಾಷ್ಟ್ರಮಟ್ಟದ ಕಬಡ್ಡಿಗೆ ಆಯ್ಕೆಯಾಗಿರುತ್ತಾರೆ.

ಇವರು ಅ.7 ರಿಂದ 11 ರವರೆಗೆ ಉತ್ತರ ಪ್ರದೇಶದ ಅಂಬಾಲದಲ್ಲಿ ನಡೆಯಲಿರುವ ವಿದ್ಯಾಭಾರತಿಯ ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ ವನ್ನು ಪ್ರತಿನಿಧಿಸಲಿದ್ದಾರೆ.