ಎಡಮಂಗಲ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳು ಐಡಿ, ಬೆಲ್ಟ್ ವಿತರಣೆ

0

ಎಡಮಂಗಲ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳು ನೀಡಿದ ಐಡಿ, ಬೆಲ್ಟ್ ವಿತರಣಾ ಕಾರ್ಯಕ್ರಮ ಸೆ. 9ರಂದು ಶಾಲಾ ಎಸ್.ಡಿ.ಎಂ.ಸಿ ಸಭೆಯ ಸಂದರ್ಭದಲ್ಲಿ ನಡೆಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಶೀನಪ್ಪ ಮುಳಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದಾನಿಗಳಾದ ಹಿರಿಯಣ್ಣ ಗೌಡ ದೋಳ್ತಿಲ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಕಲ್ಲೆಂಬಿ, ಶಾಲಾ ಮುಖ್ಯ ಗುರುಗಳಾದ ವಸಂತ ಗೌಡ ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯಣ್ಣ ಗೌಡ ದೋಳ್ತಿಲ ವಿದ್ಯಾರ್ಥಿಗಳಿಗೆ ಐಡಿ ಮತ್ತು ಬೆಲ್ಟ್ ವಿತರಿಸಿ ಶುಭ ಹಾರೈಸಿದರು.

ಇತರ ದಾನಿಗಳಾದ ತಿಮ್ಮಪ್ಪ ಗೌಡ ಮಣಿಲ ಮತ್ತು ನವೀನ್ ಜಾಲ್ತಾರು ಸಹಕರಿಸಿದರು. ಶಾಲಾ ಮುಖ್ಯ ಶಿಕ್ಷಕರು ವಂದಿಸಿದರು. ಪೋಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.