ತಾಲೂಕು ಮೊಗೇರ ಯುವ ವೇದಿಕೆಯಿಂದ ಕೆಸರು ಗದ್ದೆ ಕ್ರೀಡಾಕೂಟ

0

ಸುಳ್ಯ ತಾಲೂಕು ಮೊಗೇರ ಯುವ ವೇದಿಕೆ ಇದರ ವತಿಯಿಂದ ಕೆಸರು ಗದ್ದೆ ಕ್ರೀಡಾಕೂಟವು ಅಜ್ಜಾವರ ಗ್ರಾಮದ ಬೆಳಂತಿಮಾರ್ ಮೇನಾಲದಲ್ಲಿ ….ರಂದು ನಡೆಯಿತು.
ಕ್ರೀಡಾಕೂಟವನ್ನು ಸ್ಥಳದಾನಿ ಸುಶೀಲ ರೈ ಮೇನಾಲ ಉದ್ಘಾಟಿಸಿದರು. ವಿವಿಧ ಆಟೋಟ ಸ್ಪರ್ಧೆಗಳು ಮಹಿಳೆಯರು , ಪುರುಷರು ಹಾಗೂ ಮಕ್ಕಳಿಗೆ ನಡೆಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರಸಾದ್ ರೈ ಮೇನಾಲ ಸದಸ್ಯರು ಗ್ರಾಮ ಪಂಚಾಯತ್ ಅಜ್ಜಾವರ, ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ದಂತಡ್ಕ, ತಾಲೂಕು ಮೊಗೇರ ಯುವ ವೇದಿಕೆ ಅಧ್ಯಕ್ಷ ಲಕ್ಷ್ಮಣ ಪಾರೆ, ರಂಜಿತ್ ರೈ ಮೇನಾಲ, ಶಂಕರ ಪೆರಾಜೆ , ಮಹೇಶ್ ರೈ ಮೇನಾಲ, ರಾಮಪ್ಪ ನಿವೃತ್ತ ಅರಣ್ಯ ರಕ್ಷಕರು, ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಳ್ಳತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮೊಗೇರ ಸಮುದಾಯದ ಪ್ರಮುಖರು ಹಾಗೂ ಜನರು ಉಪಸ್ಥಿತರಿದ್ದರು.

ಅತಿಥಿಗಳಿಂದ ಶುಭ ಹಾರೈಕೆ : ಸಭಾ ಕಾರ್ಯಕ್ರಮದಲ್ಲಿ ಕುಮಾರಿ ಭಾಗೀರಥಿ ಮುರುಳ್ಯ ಶಾಸಕಿ ಸುಳ್ಯ ವಿಧಾನ ಸಭಾ ಕ್ಷೇತ್ರ ಭಾಗವಹಿಸಿ ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಲಕ್ಶ್ಮಣ ಪಾರೆ, ಮಹೇಶ್ ರೈ ಮೇನಾಲ, ಡಾ. ರಘು ಬೆಳ್ಳಿಪ್ಪಾಡಿ, ಮಂಜುನಾಥ್ ಬಂಗ್ಲೆಗುಡ್ಡೆ, ಸೋಮಶೇಖರ ಹಾಸನಡ್ಕ , ಶಂಕರ್ ಪೆರಾಜೆ, ಅಚ್ಚುತ ಮಲ್ಕಜೆ, ನಂದರಾಜ್ ಸಂಕೇಶ, ವಿಟ್ಲದ ಉಪತಹಶೀಲ್ದಾರ್ ವಿಜಯ ವಿಕ್ರಂ ಜಿ. ರಾಮಕುಂಜ,
ಲೋಕೇಶ್ ಪಿ ತಾಲೂಕು ಮೊಗೇರ ಯುವ ವೇದಿಕೆ ಸ್ಥಾಪಕಾಧ್ಯಕ್ಷರು , ಕೇಶವ ಮಾಸ್ತರ್ ಬಂಗ್ಲೆ ಗುಡ್ಡೆ, ರವಿ ಮಡಿಕೇರಿ ಮಾಜಿ ಸದಸ್ಯರು ಕರ್ನಾಟಕ ರಾಜ್ಯ ತುಳು ಅಕಾಡಮಿ, ಸೋಮಶೇಖರ ಹಾಸನಡ್ಕ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ

ಅತ್ಯುತ್ತಮ ಸಮಾಜ ಸೇವೆಗಾಗಿ ಖ್ಯಾತ ಕ್ಯಾನ್ಸರ್ ತಜ್ಞ ಡಾ.ರಘು ಬೆಳ್ಳಿಪ್ಪಾಡಿ, ಅತ್ಯುತ್ತಮ ಕಲಾಸೇವೆಗಾಗಿ ಮಂಜುನಾಥ್ ಬಂಗ್ಲೆಗುಡ್ಡೆ ಯವರನ್ನು ಶ್ರೀ ಮತಿ ದೇವಕಿ ಮತ್ತು ರಾಮ ಪಲ್ಲತಡ್ಕ ರವರು ಸನ್ಮಾನಿಸಿದರು.

ಬಹುಮಾನ ಪಡೆದುಕೊಂಡ ತಂಡಗಳು

2023 ನೇ ಸಾಲಿನ ಆಟೋಟ ಸ್ಪರ್ಧೆಯಲ್ಲಿ, ವಾಲಿಬಾಲ್ ಪ್ರಥಮ ಪುರುಷರ ವಿಭಾಗ ಬೆಂಡಾಡಿ ಕಡಬ ವಾಲಿಬಾಲ್ ಪುರುಷರ ವಿಭಾಗ ದ್ವಿತೀಯ ತುಳುನಾಡ್ ಜವನೆರ್ ಕುಕ್ಕುಜಡ್ಕ, ಮಹಿಳೆಯರ ವಿಭಾಗ ತ್ರೋಬಲ್ ಪ್ರಥಮ ನಾಗಶ್ರೀ ದಾಸನ ಕಜೆ , ಮಹಿಳೆಯರ ವಿಭಾಗ ತ್ರೋಬಾಲ್ ದ್ವಿತೀಯ ಸ್ವಾಮಿ ಕೊರಗಜ್ಜ ಕೊಡಂಕೇರಿ ಬಾಳಿಲ , ಹಗ್ಗ ಜಗ್ಗಾಟ ಪುರುಷರ ವಿಭಾಗ ಪ್ರಥಮ ಮೈರಾಳ A ತಂಡ , ಹಗ್ಗ ಜಗ್ಗಾಟ ಪುರುಷರ ವಿಭಾಗ ದ್ವಿತೀಯ ಮೈರಾಳ B ತಂಡ, ಮಹಿಳೆಯರ ಹಗ್ಗ ಜಗ್ಗಾಟ ಪ್ರಥಮ ಕೊಡಿಯಾಲ, ದ್ವಿತೀಯ ಮಹಿಳೆಯರ ಹಗ್ಗ ಜಗ್ಗಾಟ ಬಂಗ್ಲೆಗುಡ್ಡೆ ತಂಡ ಪಡೆದುಕೊಂಡವು.

LEAVE A REPLY

Please enter your comment!
Please enter your name here