ಗುತ್ತಿಗಾರು : ಬಾಲಕರ ತ್ರೋಬಾಲ್ ತಂಡ ರನ್ನರ್

0

ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕಾಲೇಜು ವಿಭಾಗ) ಗಾಂಧಿನಗರ ಸುಳ್ಯ ಇವರ ಜಂಟಿ ಆಶ್ರಯದಲ್ಲಿ ಸೆ. 16ರಂದು ನಡೆದ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕರ ತ್ರೋಬಾಲ್ ತಂಡವು ನೆಹರು ಮೆಮೋರಿಯಲ್ ಪಿ.ಯು ಕಾಲೇಜುನೊಂದಿಗೆ ಸೆಣಸಾಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ತಂಡದಲ್ಲಿ ಮಿಥುನ್ ಕೆ, ಓಂಪ್ರಸಾದ್, ನಿತೆಸ್ ಎಸ್, ಗಗನ್, ಪುನೀತ್ ಐ ಎಸ್, ಕಾರ್ತಿಕ್ ಕೆ ಎಂ, ವಿನೀತ್ ಕೆ ಎಸ್,ಕುಶನ್,ಕೆ ಎಮ್, ಯತಿನ್ ಬಿ, ಜೀವನ್ ಕೆ, ಅಕ್ಷಯ್ ಪಿ ಎಸ್,ಭಾಗವಹಿಸಿದರು.

ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್ ಏನೆಕಲ್ಲು ತರಬೇತಿ ನೀಡಿರುತ್ತಾರೆ.ತಂಡದ ನಿರ್ದೇಶಕರಾಗಿ ಪ್ರಾಂಶುಪಾಲರಾದ ಚೆನ್ನಮ್ಮ ಪಿ ಹಾಗೂ ಎಲ್ಲಾ ಉಪನ್ಯಾಸಕ ವೃಂದ ತಂಡ ಸಂಯೋಜನೆಗೆ ಸಹಕರಿಸಿರುತ್ತಾರೆ.