ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ-ರಜತ‌ ಸಂಭ್ರಮ

0


ಶ್ರೀ ಮಹಾಗಣಪತಿಗೆ ಬೆಳ್ಳಿ ಕಿರೀಟ ಸಮರ್ಪಣೆ


ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2023 ಇದರ ವತಿಯಿಂದ ಜರಗುವ
ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ-ರಜತ ಸಂಭ್ರಮ ಸೆ.19ರಿಂದ ಸೆ.21ತನಕ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಜರುಗಲಿದೆ.

ಸೆ.19.ರಂದು ಪೂರ್ವಾಹ್ನ ಪ್ರತಿಷ್ಠೆ ಗಣಪತಿ ಹೋಮ,ರಜತ ಸಂಭ್ರಮದ ಸವಿನೆನಪಿಗಾಗಿ ಶ್ರೀ ಮಹಾಗಣಪತಿಗೆ
ಬೆಳ್ಳಿ ಕಿರೀಟ ಸಮರ್ಪಣೆ ನಡೆಯಿತು.
ಬಳಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ಉದ್ಘಾಟನೆ ನಡೆಯಿತು.


ಕ್ರೀಡಾ ಸ್ಪರ್ಧೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ಉದ್ಘಾಟಿಸಿದರು.ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಉದ್ಘಾಟಿಸಿದರು. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು ಸಾಕ್ಷ್ಯಚಿತ್ರ ‘ಬೊಳ್ಳಿ ಬೊಲ್ಪು’ ಬಿಡುಗಡೆ ಗೊಳಿಸಿದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು ಸಭಾಧ್ಯಕ್ಷತೆ ವಹಿಸಿದ್ದರು. ಆರಾಧನಾ ಸಮಿತಿಯ ಗೌರವಾಧ್ಯಕ್ಷ ಜಾಕೆ ಮಾಧವ ಗೌಡ,ಅಧ್ಯಕ್ಷ ಚಿನ್ನಪ್ಪ ಸಂಕಡ್ಕ , ಕಾರ್ಯದರ್ಶಿ ತೀರ್ಥಾನಂದ ಕೊಡೆಂಕಿರಿ,ಕ್ರೀಡಾ ಸ್ಪರ್ಧೆಗಳ ಸಂಚಾಲಕ ಯೋಗೀಶ್ ಚಿದ್ಗಲ್, ಸಾಂಸ್ಕೃತಿಕ ಸ್ಪರ್ಧೆ ಸಂಚಾಲಕ ಸತೀಶ್ ಪಂಜ,ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಪವನ್ ಪಲ್ಲತ್ತಡ್ಕ
ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಪುರಂದರ ಶೆಟ್ಟಿ ನಾಗತೀರ್ಥ ಪ್ರಾರ್ಥಿಸಿದರು. ಸಂತೋಷ್ ಜಾಕೆ ಸ್ವಾಗತಿಸಿದರು. ಜೀವನ್ ಶೆಟ್ಟಿಗದ್ದೆ ನಿರೂಪಿಸಿದರು.ಜಯರಾಮ ಕಲ್ಲಾಜೆ ವಂದಿಸಿದರು.

ವಿಶೇಷವಾಗಿ ಶೃಂಗಾರ ಗೊಂಡ ಮಂಟಪ

ಶ್ರೀ ಗಣಪತಿ ದೇವರ ಮೂರ್ತಿಯನ್ನು ವಿಶೇಷ ಶೃಂಗಾರ ಗೊಂಡ ಮಂಟಪದಲ್ಲಿ ಪ್ರತಿಷ್ಠೆ ನಡೆಯಿತು.ಕಬ್ಬು, ಗರಿಕೆ,ಅಶ್ವತ ಎಲೆ, ಬಾಳೆ, ಹೂವಿನಿಂದ ಅಲಂಕಾರ ಗೊಂಡಿದೆ.
ವೈದಿಕ ಕಾರ್ಯಕ್ರಮ:
ಪೂರ್ವಾಹ್ನ ಪ್ರತಿಷ್ಠೆ ಗಣಪತಿ ಹೋಮ,ರಜತ ಸಂಭ್ರಮದ ಸವಿನೆನಪಿಗಾಗಿ ಶ್ರೀ ಮಹಾಗಣಪತಿಗೆ
ಬೆಳ್ಳಿ ಕಿರೀಟ ಸಮರ್ಪಣೆ,ಶ್ರೀ ಶಾರದಾಂಬಾ ಭಜನೆ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ ಜರುಗಿತು.ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ, ಸಂಜೆ ಪಂಬೆತ್ತಾಡಿ ಪಂಚಶ್ರೀ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ಜರುಗಲಿದೆ.

ಸಂಜೆ:ಸಭಾ ಕಾರ್ಯಕ್ರಮ;
ಸಂಜೆ ಗಂಟೆ 7 ರಿಂದ ಸಭಾ ಕಾರ್ಯಕ್ರಮ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪಂಜ ಸಾರ್ವಜನಿಕ ಆರಾಧನಾ ಸಮಿತಿ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ಕೆರೆ ಪ್ರಧಾನ ಭಾಷಣ ಮಾಡಲಿದ್ದಾರೆ. ಸಾರ್ವಜನಿಕ ಶ್ರೀ ಗಣೇಶೋತ್ಸವದ 25 ವರ್ಷಗಳ ಅಧ್ಯಕ್ಷರುಗಳಿಗೆ ಸನ್ಮಾನ ಜರುಗಲಿದೆ. ಆರಾಧನಾ ಸಮಿತಿಯ ಗೌರವಾಧ್ಯಕ್ಷ ಜಾಕೆ ಮಾಧವ ಗೌಡ ರವರು ಸನ್ಮಾನಿಸಲಿದ್ದಾರೆ. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು ಉಪಸ್ಥಿತರಿರುವರು.
ರಾತ್ರಿ ಗಂಟೆ 8:30 ರಿಂದ ಮಹಾಪೂಜೆ ,ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ:
. ಸಂಜೆ ಗಂಟೆ5.30ರಿಂದ ರಂಜನಿ ಸಂಗೀತ ಸಭಾ -ಪಂಜ ಶಾಖೆ ಯವರ ಪ್ರಸ್ತುತಿಯ ಲಘು ಸಂಗೀತ..
ರಾತ್ರಿ ಗಂಟೆ 9 ರಿಂದ ಕೆ ಎಸ್ ಎಸ್ ಕಾಲೇಜು ಸುಬ್ರಮಣ್ಯ ಸಾಂಸ್ಕೃತಿಕ ಕಲಾ ತಂಡ ಪ್ರಸ್ತುತಿಯ ‘ನೃತ್ಯ ವೈಭವ ‘ ಜರುಗಲಿದೆ.
ಸೆ.20: ಕಾರ್ಯಕ್ರಮಗಳು :
ಸೆ.20. ರಂದು ಪೂರ್ವಾಹ್ನ ಬೆಳಗಿನ ಪೂಜೆ, ಕೇನ್ಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ , ಅಳ್ಪೆ ಚಿಂಗಾಣಿ ಗುಡ್ಡೆ ಶ್ರೀ ವಿಷ್ಣು ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಸಂಜೆ ಪಂಜ ವನಿತಾ ಮಹಿಳಾ ಭಜನಾ ಮಂಡಳಿ,ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಿಂದ ಭಜನಾ ಸಂಕೀರ್ತನೆ.
ಸಭಾ ಕಾರ್ಯಕ್ರಮ:
ರಾತ್ರಿ ಗಂಟೆ 7 ರಿಂದ ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯ ಅಧ್ಯಕ್ಷ ಸವಿತಾರಾ ಮುಡೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬೆಂಗಳೂರು ಉದ್ಯಮಿ ಡಿ ಕಿರಣ್ ಚಂದ್ರ ಪಾಲ್ಗೊಳ್ಳಲಿದ್ದಾರೆ. ಅರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹವ್ಯಾಸಿ ಯಕ್ಷಗಾನ ಅರ್ಥದಾರಿ ಜಯಪ್ರಕಾಶ್ ಎಂ ಆರ್ ಉಪನ್ಯಾಸ ನೀಡಲಿದ್ದಾರೆ. ಆರಾಧನಾ ಸಮಿತಿ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ ಉಪಸ್ಥಿತರಿರುವರು.
ರಾತ್ರಿ 8.30ರಿಂದ ಮಹಾ ಪೂಜೆ, ಪ್ರಸಾದ ವಿತರಣೆ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ :
ಸಂಜೆ ಗಂಟೆ 6ರಿಂದ ಜೀವನ್ ಬೆಳ್ಳಾರೆ ನಿರ್ದೇಶನದ ಡ್ಯಾನ್ಸ್ & ಬೀಟ್ ನೃತ್ಯ ಕಲಾ ಕೇಂದ್ರ ಪಂಜ ಪ್ರಸ್ತುತಿಯ ನೃತ್ಯ ವೈವಿಧ್ಯ.ರಾತ್ರಿ 8.30ರಿಂದ ಸಂಗೀತ ವಿದ್ಯಾನಿಧಿ ಡಾ.ವಿದ್ಯಾಭೂಷಣ ಬೆಂಗಳೂರು ಪ್ರಸ್ತುತಿಯ ಭಕ್ತಿ ಗಾನ ಸುಧೆ ನಡೆಯಲಿದೆ.
ಸೆ .21: ಶೋಭಾಯಾತ್ರೆ ಜಲಸ್ತಂಭನ:
ಸೆ. 21ರಂದು ಪೂರ್ವಾಹ್ನ ಗಂಟೆ 8.15 ರಿಂದ ಬೆಳಗಿನ ಪೂಜೆ, ನಾಗತೀರ್ಥ ಪಂಚಲಿಂಗೇಶ್ವರ ಭಜನಾ ಮಂಡಳಿ , ಓಂಕಾರ ಭಜನಾ ಮಂಡಳಿ ಎಣ್ಮೂರು ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.
ಸಂಜೆ ಗಂಟೆ 3ರಿಂದ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ಜರುಗಲಿದೆ. ಶೋಭಾಯಾತ್ರೆಯಲ್ಲಿ
ತುಳುನಾಡಿನ ಹೆಮ್ಮೆಯ ಹುಲಿ ವೇಷ, ಕೀಲು ಕುದುರೆ ,ಕುಣಿತ ಭಜನೆ
ಮೊದಲಾದ ತಂಡಗಳು ಪಾಲ್ಗೊಳ್ಳಲಿವೆ.

LEAVE A REPLY

Please enter your comment!
Please enter your name here