ಕುಂಬಳಚೇರಿ : ರಾಷ್ಟ್ರೀಯ ಪೋಷಣ್ ಮಾಸಾಚರಣೆ

0

ಪೆರಾಜೆ ಕುಂಬಳಚೇರಿ ಅಂಗನವಾಡಿ ಕೇಂದ್ರದಲ್ಲಿ ಸೆ.೨೩ರಂದು ರಾಷ್ಟ್ರೀಯ ಪೋಷಣ್ ಮಾಸಾಚರಣೆ, ಪೌಷ್ಠಿಕ ಆಹಾರ ಸಪ್ತಾಹ, ಮಾತೃವಂದನಾ ಸಪ್ತಾಹ ನಡೆಯಿತು.
ಆರೋಗ್ಯ ಸುರಕ್ಷಣಾ ಅಧಿಕಾರಿ ಶೈಲಜಾ ಪೌಷ್ಠಿಕ ಆಹಾರದ ಮತ್ತಿತರ ವಿಚಾರದ ಕುರಿತು ಮಾತನಾಡಿದರು. ಗ್ರಾ.ಪಂ. ಸದಸ್ಯ ಉದಯ ಕುಮಾರ್ ಕುಂಬಳಚೇರಿ, ಕುಂಬಳಚೇರಿ ಶಾಲಾ ಮುಖ್ಯ ಶಿಕ್ಷಕ ರಾಜು, ಬಾಲವಿಕಾಸ ಸಮಿತಿ ಅಧ್ಯಕ್ಷೆ ವನಿತಾ ಎನ್.ಹೆಚ್., ಶುಭಹಾರೈಸಿದರು.
ಅಂಗನವಾಡಿ ಕಾರ್ಯಕರ್ತೆ ಯುವಕಲಾ ಅಂಗನವಾಡಿಯಲ್ಲಿ ಸಿಗುವ ಸೌಲಭ್ಯಗಳನ್ನು ತಿಳಿಸಿದರು. ವಿವಿಧ ಪೌಷ್ಠಿಕ ಆಹಾರದ ಪ್ರಾತ್ಯಕ್ಷಿತೆ ಮಾಡಲಾಯಿತು. ಅಂಗನವಾಡಿ ಸಹಾಯಕಿ ಜಯಶ್ರೀ ಹಾಗೂ ಪುಟಾಣಿ ಚರೀಷ್ಮ ಪ್ರಾರ್ಥಿಸಿದರು. ಯುವಕಲಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆಶಾ ಕಾರ್ಯಕರ್ತೆ ಹೇಮಲತಾ, ಗರ್ಭಿಣಿಯವರು, ಬಾಣಂತಿಯರು, ಮಕ್ಕಳ ಪೋಷಕರು ಭಾಗವಹಿಸಿದ್ದರು.