ಚಲಿಸುತ್ತಿದ್ದ ಲಾರಿಯ ಟೈಯರ್ ಸ್ಫೋಟ

0

ಚಲಿಸುತ್ತಿದ್ದ ಲಾರಿಯ ಟಯರ್ ಸ್ಫೋಟಗೊಂಡ ಘಟನೆ ಮಡಿಕೇರಿ- ಸುಳ್ಯ ರಸ್ತೆಯ ತಾಳತ್ತಮನೆ ಎಂಬಲ್ಲಿ ಸಂಭವಿಸಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೆ ಭಾರೀ ಅನಾಹುತ ತಪ್ಪಿದೆ. ಮಡಿಕೇರಿ – ಮಂಗಳೂರು ರಸ್ತೆಯಲ್ಲಿ ಜಲ್ಲಿ ತುಂಬಿಸಿ ಸಾಗುತ್ತಿದ್ದ ಲಾರಿಯ ಟೈಯರ್ ಸ್ಫೋಟಗೊಂಡು ರಸ್ತೆ ಬದಿಯಲ್ಲಿ ವಾಲಿಕೊಂಡು ನಿಂತಿದೆ. ಲಾರಿಯ ಒಂದು ಬದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಚಾಲಕನನ್ನು ಸುಮಾರು ಎರಡು ಗಂಟೆಗಳ ಕಾಲ ಪ್ರಯತ್ನಿಸಿ ಆತನನ್ನು ರಕ್ಷಣೆ ಮಾಡಲಾಯಿತು.