ಸೋಣಂಗೇರಿ ಹಾಲು ಉತ್ಪಾದಕರ ಸಾಮಾನ್ಯ ಸಭೆ

0

ಸೋಣಂಗೇರಿ ಹಾಲು ಉತ್ಪಾದಕರ ಸಾಮಾನ್ಯ ಸಭೆಯು ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ
ಸೆ.25 ರಂದು ಜರುಗಿತು.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟದ ನಿರ್ವಹಣಾಧಿಕಾರಿ ಡಾ|ನಿರಂಜನ, ಸೋಣಂಗೇರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಭಾಕರ ರೈ, ಉಪಾಧ್ಯಕ್ಷ ಸತೀಶ್ ಕೊಮ್ಮೆಮನೆ, ನಿವ್ರತ್ತ ಪ್ರಾಂಶುಪಾಲೆ ಶ್ರೀಮತಿ ತಂಗಮ್ಮ, ಸಂಘದ ಕಾರ್ಯದರ್ಶಿ ಶ್ರೀಮತಿ ಹರಿಣಾಕ್ಷಿ ಹರೀಶ್ ಸೋಣಂಗೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ಶ್ರೀಮತಿ ಮಲ್ಲಿಕಾ ಕುಕ್ಕಂದೂರುರವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಸಂಘದ ಅಧ್ಯಕ್ಷ ಪ್ರಭಾಕರ ರೈಯವರು ದೀಪ ಬೆಳಗಿಸಿದರು.ಸಭೆಯಲ್ಲಿ 2022-23 ಹಾಗೂ 2023-24 ರೈ ವರದಿಯನ್ನು ಮಂಡನೆ ಮಾಡಲಾಯಿತು.ಒಕ್ಕೂಟದ ನಿರ್ವಹಣಾಧಿಕಾರಿಯವರು ಸಂಘದ ಲಾಭ ಮತ್ತು ಸಂಘದಿಂದ ಸದಸ್ಯರುಗಳಿಗೆ ಏನೆಲ್ಲಾ ಸೌಲಭ್ಯಗಳು ಇದೆ ಎಂಬುದನ್ನು ತಿಳಿಸಿದರು.

ಮಾಜಿ ಸದಸ್ಯರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ತಂಗಮ್ಮರವರು ನೆರವೇರಿಸಿ, ಕಾರ್ಯದರ್ಶಿ ಶ್ರೀಮತಿ ಹರಿಣಾಕ್ಷಿ ಹರೀಶ್ ಸ್ವಾಗತಿಸಿದರು, ಸಂಘದ ಉಪಾಧ್ಯಕ್ಷ ಸತೀಶ್ ಕೊಮ್ಮೆಮನೆ ವಂದಿಸಿದರು.

ಸಭೆಯಲ್ಲಿ ಸಂಘದ ಸದಸ್ಯರುಗಳು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದರು.