ಕುಕ್ಕುಜಡ್ಕ ಸಹಕಾರಿ ಸಂಘದ ಕಾಂಪ್ಲೆಕ್ಸ್ ನಲ್ಲಿ ಶ್ರೀ ಲಕ್ಷ್ಮೀ ಮೆಡಿಕಲ್ಸ್ ಶುಭಾರಂಭ

0

ಕುಕ್ಕುಜಡ್ಕದ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಸುವಿನ್ ಡಿ ಮತ್ತು ಡಾ.ಹರ್ಷಿತಾ ಸುವಿನ್ ರವರ ಮಾಲಕತ್ವದ
ಶ್ರೀ ಲಕ್ಷ್ಮೀ ಮೆಡಿಕಲ್ಸ್
ಸೆ.24 ರಂದು ಶುಭಾರಂಭಗೊಂಡಿತು.

ಹಿರಿಯ ವೈದ್ಯರಾದ ಡಾ.ಗೋಪಾಲಕೃಷ್ಣ ಪೈಲೂರು ದೀಪ ಪ್ರಜ್ವಲಿಸಿದರು‌. ಹಿರಿಯರಾದ ಡಾ.ಎಂ.ಬಿ.ಪಾರೆ, ಎಂ.ಜಿ.ಸತ್ಯನಾರಾಯಣ ಮಾಯ್ಪಡ್ಕ, ಗಣಪಯ್ಯ ಪೈಲೂರು, ಸೊಸೈಟಿ ಅಧ್ಯಕ್ಷ ಕೇಶವ ಕರ್ಮಜೆ, ಸಿ.ಇ.ಒ ಮೋಹನ್ ಕುಮಾರ್ ಪೊಯ್ಯೆಮಜಲು ಶುಭ ಹಾರೈಸಿದರು.


ಮಾಲಕರ ತಂದೆ ನಿವೃತ್ತ ಆರೋಗ್ಯ ನಿರೀಕ್ಷಕ ಡೊಂಬಯ್ಯ ಗೌಡ, ತಾಯಿ ಶ್ರೀಮತಿ ಲಕ್ಷ್ಮೀ ‌ಕುದ್ಕುಳಿ, ಬಂಧುಗಳಾದ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಬಾಬು ಗೌಡ, ಶ್ರೀಮತಿ ಶೀಲಾವತಿ,ನಿವೃತ್ತ ಮುಖ್ಯ ಶಿಕ್ಷಕ ಮೋಹನ ಕುಕ್ಕುಜಡ್ಕ, ನಿವೃತ್ತ ಶಿಕ್ಷಕಿ ಶ್ರೀಮತಿಜಯಲಕ್ಷ್ಮಿ,ಗುತ್ತಿಗಾರು ಆರೋಗ್ಯ ಕೇಂದ್ರದ
ಡಾ.ಚೈತ್ರ ಬಾನು, ಡಾ.ವಿದ್ಯಾ ಪುತ್ತೂರು, ಗೌತಮಿಕುಕ್ಕುಜಡ್ಕ,‌
ನಿತಿನ್ ಮತ್ತಿತರರು ಉಪಸ್ಥಿತರಿದ್ದರು.
ಮಾಲಕ ಸುವಿನ್ ಡಿ. ಎಲ್ಲರನ್ನು ಸ್ವಾಗತಿಸಿದರು. ಸಿಬ್ಬಂದಿ ವಿದ್ಯಾ ಸಹಕರಿಸಿದರು.
ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ.ಚೈತ್ರಬಾನು , ಡಾ.ವಿದ್ಯಾ ಮತ್ತು ಡಾ.ಹರ್ಷಿತಾ ರವರ‌ ನೇತೃತ್ವದಲ್ಲಿ ಸಾರ್ವಜನಿಕರಿಗೆ
ಉಚಿತವಾಗಿ ಬಿ.ಪಿ ,ಶುಗರ್ ಪರೀಕ್ಷಿಸಿ ಆರೋಗ್ಯ ತಪಾಸಣೆ ನಡೆಸಿದರು.