ಜಿಲ್ಲಾ ಮರಾಟಿ ಸಂಘದಿಂದ ಕು. ತನ್ವಿ ತಂಟೆಪ್ಪಾಡಿಯವರಿಗೆ ಸನ್ಮಾನ

0

ದ.ಕ‌. ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಮಂಗಳೂರು ಇದರ ವಾರ್ಷಿಕ ಮಹಾಸಭೆಯಲ್ಲಿ ರಾಷ್ಟ್ರೀಯ ಯೋಗಪಟು ಕು. ತನ್ವಿ ತಂಟೆಪ್ಪಾಡಿಯವರಿಗೆ ಸನ್ಮಾ‌ನ ಕಾರ್ಯಕ್ರಮ ಸೆ. 24 ರಂದು ಮಂಗಳೂರಿನ ಕುಲಶೇಖರದಲ್ಲಿ ನಡೆಯಿತು. ಜಿಲ್ಲಾ ಮರಾಟಿ ಮಹಿಳಾ ವೇದಿಕೆಯ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರವಿಪ್ರಸಾದ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ಮಹಾಲಿಂಗ ನಾಯ್ಕ್, ಮಹಿಳಾ ವೇದಿಕೆಯ ಅಧ್ಯಕ್ಷೆ ಶಾಲಿನಿ ನಾಯ್ಕ್, ಕು. ತನ್ವಿಯ ತಾತ ಶೇಷಪ್ಪ ನಾಯ್ಕ ತಂಟೆಪ್ಪಾಡಿ, ತಂದೆ‌ ಹರಿಶ್ಚಂದ್ರ ನಾಯ್ಕ್ ತಂಟೆಪ್ಪಾಡಿ ತಾಯಿ ಶ್ರೀಮತಿ ಜ್ಯೋತಿ ಸೇರಿದಂತೆ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.