ದೆಹಲಿ ಪಟ್ಲ ಸಂಭ್ರಮದಲ್ಲಿ ಪ್ರದರ್ಶನ ನೀಡುವ ಕಲಾವಿದರಿಗೆ ತಂಟೆಪ್ಪಾಡಿ ನಿನಾದದಲ್ಲಿ ಬೀಳ್ಕೊಡುಗೆ

0

ಯಕ್ಷಧ್ರುವ ಪಟ್ಲ ಫೌಂಡೇಶನ್ ದೆಹಲಿ ‌ಶಾಖೆ ಮತ್ತು ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರ ಇದರ ಆಶ್ರಯದಲ್ಲಿ ಸೆ.30 ರಂದು ದೆಹಲಿಯಲ್ಲಿ ನಡೆಯಲಿರುವ ಯಕ್ಷಧ್ರುವ ಪಟ್ಲ ಸಂಭ್ರಮ 2023 ರ ಕಾರ್ಯಕ್ರಮದಲ್ಲಿ ಸಾಹಿತಿ ವಸಂತ ಶೆಟ್ಟಿ ಬೆಳ್ಳಾರೆ ಮತ್ತು ಡಾನ್ಸ್ ಮಾಸ್ಟರ್ ಪ್ರಮೋದ್ ಸಂಘಟಿಸಿರುವ ಬೆಳ್ಳಾರೆ ಹಾಗೂ ಕಳಂಜ ಗ್ರಾಮದ ಗ್ರಾಮೀಣ ಪ್ರತಿಭೆಗಳು ಭಾಗವಹಿಸಲಿದ್ದು ಕಲಾವಿದರನ್ನು ತಂಟೆಪ್ಪಾಡಿಯ ನಿನಾದ ಕಲಾ ಕೇಂದ್ರದಲ್ಲಿ ಸೆ.28 ರಂದುಬೀಳ್ಕೊಡಲಾಯಿತು.

ಕಳಂಜ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಮಕ್ಕಳ ಪೋಷಕರು, ಸ್ಥಳೀಯರು ಭಾಗವಹಿಸಿದರು. ಪಂ.ಸದಸ್ಯ ಅಶೋಕ್ ಚೂಂತಾರು ಕಲಾವಿದರನ್ನು ಅಭಿನಂದಿಸಿ ಶುಭ ಹಾರೈಸಿದರು.