ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದಿಂದ ಡಾ. ಅನುರಾಧಾ ಕುರುಂಜಿಯವರಿಗೆ ಗೌರವಾರ್ಪಣೆ

0

ಇತ್ತೀಚೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಸುಳ್ಯದ ಉಪನ್ಯಾಸಕಿ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರೆ ಡಾ. ಅನುರಾಧಾ ಕುರುಂಜಿಯವರನ್ನು ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದಿಂದ ಗೌರವಿಸಲಾಯಿತು. ಕಾವೇರಿ ನಿಸರ್ಗಧಾಮದಲ್ಲಿ ನಡೆದ “ಸಿರಿ ಸಂಭ್ರಮ” ಕವಿಗೋಷ್ಠಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದ
ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಗೌರವಿಸಿದರು.


ವೇದಿಕೆಯಲ್ಲಿ ವಿಜಯ ವಿಷ್ಣು ಭಟ್, ಉಷಾ, ಸಂತೋಷ ಕುಡೆಕಲ್ಲು, ರಂಗಸ್ವಾಮಿ, ಉರ ನಾಗೇಶ್ , ಶ್ರೀಮತಿ ಫ್ಯಾನ್ಸಿ ಮುತ್ತಣ್ಣ , ಶ್ರೀಮತಿ ಉಳವಂಗಡ ಕಾವೇರಿ, ವೈಲೇಶ್ , ನ.ಲ ವಿಜಯ್, ತುಳಸಿ ಮೊದಲಾದವರು ಉಪಸ್ಥಿತರಿದ್ದರು.