ಮಹಿಳೆ ಜೊತೆ ಅಕ್ರಮ ಸಂಬಂಧ; ಬೆತ್ತಲೆ ಫೊಟೋ ತೆಗೆದು ಬ್ಲ್ಯಾಕ್‌ಮೇಲ್ ಆರೋಪ

0


ಕಾರವಾರ ಪೊಲೀಸರಿಂದ ಪ್ರಶಾಂತ್ ಮಾಣಿಲ ಬಂಧನ

ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿ ಆಕೆಯ ಬೆತ್ತಲೆಫೊಟೋ ತೆಗೆದು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಲ್ಲಿ ಸುಬ್ರಹ್ಮಣ್ಯದ ಪ್ರಶಾಂತ್ ಭಟ್ ಮಾಣಿಲ ಕಾರವಾರ ಪೊಲೀಸರಿಂದ ಬಂಧನಕ್ಕೊಳಗಾಗಿರುವುದಾಗಿ ತಿಳಿದು ಬಂದಿದೆ.

ದೂರುದಾರ ವಿವಾಹಿತ ಮಹಿಳೆಯು ಸಂಗೀತದಲ್ಲಿ ಆಸಕ್ತಿ ಉಳ್ಳವಳಾಗಿದ್ದು, ಕ್ಲಬ್ ಹೌಸ್ ಅಪ್ಲಿಕೇಷನ್ ನಲ್ಲಿ ಆಗಾಗ ಹಾಡು ಹಾಡುತ್ತಿದ್ದರೆನ್ನಲಾಗಿದೆ. ಕಳೆದ ೨೦೨೦ ರಲ್ಲಿ ಕ್ಲಬ್ ಹೌಸ್ ಅಪ್ಲಿಕೇಶನ್ ಮೂಲಕ ಈಕೆಗೆ ಆರೋಪಿ ಪ್ರಶಾಂತ ಭಟ್ ಪರಿಚಯ ಆಗಿದ್ದು, ಬಳಿಕ ಇಬ್ಬರೂ ಚಾಟ್ ಮಾಡುತ್ತಾ ಇದ್ದವರು, ನಂತರ ಫೇಸ್ ಬುಕ್ ನಲ್ಲಿ ಇಬ್ಬರೂ ಫ್ರೆಂಡ್ ಆಗಿದ್ದರೆನ್ನಲಾಗಿದೆ.

ಇದಾದ ಬಳಿಕ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ಹೇಳಿ ಆಸೆ ಹುಟ್ಟಿಸಿದ್ದು, ನಂತರ ದೂರುದಾರಳು ತನ್ನ ಮೊಬೈಲ್ ನಂಬರನ್ನು ಕೂಡ ಆರೋಪಿಗೆ ನೀಡಿ, ಇಬ್ಬರೂ ಪರಸ್ಪರ ೨ ವರ್ಷಗಳ ತನಕ ಫೋನ್ ನಲ್ಲಿ ಮೆಸೇಜ್ ಹಾಗೂ ಕಾಲ್ ದಲ್ಲಿ ಸಂಪರ್ಕದಲ್ಲಿ ಇದ್ದರೆನ್ನಲಾಗಿದೆ.


ಆರೋಪಿಯು ದೂರುದಾರಳನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ರೂಮ್ ಮಾಡಿ ಆ ದೂರುದಾರಳ ಮೇಲೆ ಲೈಂಗಿಕವಾಗಿ ಬಳಸಿ ದೂರುದಾರಳೊಂದಿಗೆ ತನ್ನ ಫೋಟೋಗಳನ್ನು ತೆಗೆದುಕೊಂಡಿದ್ದು ಇದೀಗ ವಾಟ್ಸಪ್‌ನಲ್ಲಿ ಮೆಸೆಜ್ ಮಾಡಿ, ನನ್ನ ನಿನ್ನ ಇಬ್ಬರ ಫೋಟೋ ಹಾಗೂ ನಿನ್ನ ಖಾಸಗಿ ವೀಡಿಯೋ ಹಾಗೂ ಫೋಟೋಗಳನ್ನು ನಿನ್ನ ತಾಯಿ ಹಾಗೂ ನಿನ್ನ ಗಂಡನಿಗೆ ಕಳುಹಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದು, ನಂತರ ದೂರುದಾರಳಿಗೆ ಆರೋಪಿಯು ವೀಡಿಯೋ ಕಾಲ್ ಮಾಡಿ, ಆಶ್ಲೀಲವಾಗಿ ವರ್ತಿಸುತಿದ್ದು, ನನಗೆ ಹಣದ ಸಮಸ್ಯೆ ಇದೆ, ನೀನು ನನಗೆ ಹಣ ನೀಡು, ಇಲ್ಲವಾದಲ್ಲಿ ನಾನು ನಿನ್ನ ಬೆತ್ತಲೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವೆ ಎಂದು ಪ್ರತಿ ದಿನ ಮಾನಸಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ. ದೂರುದಾರ ಮಹಿಳೆ ಹೆದರಿಕೊಂಡು ಈ ವಿಷಯವನ್ನು ತನ್ನ ಗಂಡನಿಗೆ ತಿಳಿಸಿ, ರೂ. ೨೫,೦೦೦ ಗಳನ್ನು ಆರೋಪಿಯ ಮೊಬೈಲ್ ನಂಬರಿಗೆ ಗೂಗಲ್ ಪೇ ಮಾಡಿಸಿದ್ದರು. ಪ್ರಶಾಂತ್ ಭಟ್ ಮಾಣಿಲ ತನಗೆ ಇನ್ನೂ ಹಣ ಬೇಕು ಎಂದು ದೂರುದಾರಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಾ, ಆಕೆಯ ಖಾಸಗಿ ಫೋಟೋಗಳನ್ನು ಹಾಗೂ ತನ್ನ ಜೊತೆ ಇರುವ ಫೋಟೋಗಳನ್ನು ದೂರುದಾರಳ ತಾಯಿಯ ಮೊಬೈಲಿಗೆ ವಾಟ್ಸಪ್ ಮೂಲಕ ಕಳಿಸಿದ್ದರು ಎನ್ನಲಾಗಿದೆ. ಅಲ್ಲದೇ ನಂತರ ಫೇಸ್ ಬುಕ್ ನಲ್ಲಿ ದೂರುದಾರ ಮಹಿಳೆಯ ಸ್ನೇಹಿತರಿಗೂ ಕಳುಹಿಸಿದ್ದಾನೆ. ನಂತರ ದೂರುದಾರಳ ಗಂಡನಿಗೆ ನಿನ್ನ ಹೆಂಡತಿಯ ಮರ್ಯಾದೆ ಉಳಿಯಬೇಕೆಂದರೆ, ೭ ಲಕ್ಷ ರೂಪಾಯಿ ನೀಡಿ, ಮರ್ಯಾದೆ ಉಳಿಸಿಕೋ ಎಂದು ಆತನಿಗೆ ಬ್ಯಾಕ್‌ಮೇಲ್ ಮಾಡಿದ್ದು ಹಾಗೂ ದೂರುದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದು, ದುಡ್ಡು ನೀಡದಿದ್ದರೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ.

ಪ್ರಶಾಂತ ಭಟ್ ಮಾಣಿಲ ವಿರುದ್ಧ ಸದ್ಯ ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಐಪಿಸಿ 376,376(N), 504,506,503,384 ಮತ್ತು IT Act 2008ರ 67(A) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.