














ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಜಲದುರ್ಗಾದೇವಿಗೆ ರಥ ಸಮರ್ಪಣೆ ಪ್ರಯುಕ್ತ ಪ್ರಶ್ನಾ ಚಿಂತನೆಯು ಅ.13 ರಂದು ಬೆಳಿಗ್ಗೆ ಗಂಟೆ 9.30 ರಿಂದ ನಡೆಯಲಿದೆ.
ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳು ಮತ್ತು ಶಿಲ್ಪಿಗಳಾದ ಮಹೇಶ ಮುನಿಯಂಗಳರವರ ಉಪಸ್ಥಿತಿಯಲ್ಲಿ ಶ್ರೀಧರನ್ ಪೆರುಂಬಾಳ ಇವರ ನೇತೃತ್ವದಲ್ಲಿ ನಡೆಯಲಿದೆ.
ನವಂಬರ್ ತಿಂಗಳಲ್ಲಿ ಶ್ರೀ ದೇವಿಗೆ ರಥ ಸಮರ್ಪಿಸಬೇಕೆಂದು ಸಂಕಲ್ಪಿಸಿದಂತೆ ,ರಥ ಸಮರ್ಪಣೆಯ ಬಗ್ಗೆ ನಡೆಯುವ ಪ್ರಶ್ನಾಚಿಂತನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ.









