ಚೆಂಬು : ಪಿ.ಡಿ.ಒ ಗೆ ಬೀಳ್ಕೊಡುಗೆ

0

ಚೆಂಬು ಗ್ರಾ. ಪಂ ಪಿ. ಡಿ. ಒ ಮಹದೇವ್ ಪ್ರಭು ಅವರು ಸುಮಾರು ಒಂದು ವರ್ಷದಿಂದ ಚೆಂಬು ಗ್ರಾ. ಪಂ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ಚಾಮರಾಜನಗರಕ್ಕೆ ವರ್ಗಾವಣೆಗೊಂಡಿದ್ದು ಇವರಿಗೆ ಬೀಳ್ಕೊಡುಗೆ ಸಮಾರಂಭವು ಅ.3ರಂದು ಚೆಂಬು ಗ್ರಾ. ಪಂ ಸಭಾಭವನದಲ್ಲಿ ನಡೆಯಿತು.

ಗ್ರಾ. ಪಂ ಅಧ್ಯಕ್ಷ ತೀರ್ಥರಾಮ ಪಿ. ಜಿ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಯಾಗಿ ಪಯಸ್ವಿನಿ ಬ್ಯಾಂಕ್ ಅಧ್ಯಕ್ಷ ಎನ್. ಸಿ ಅನಂತ, ಮಡಿಕೇರಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಉಪಾಧ್ಯಯ, ಚೆಂಬು ಮಾಜಿ ಗ್ರಾ. ಪಂ ಸದಸ್ಯ ಶ್ರೀನಿವಾಸ ನಿಡಿಂಜಿ, ಪಂಚಾಯತ್ ಎಲ್ಲಾ ಸದಸ್ಯರು, ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.