ಕೆವಿಜಿ ಕ್ಯಾಾಂಪಸ್ ಹಿತರಕ್ಷಣಾ ಸಮಿತಿ ರಚನೆ : ಮುಖಂಡರಿಂದ ಡಿ.ಕೆ.ಶಿ. ಭೇಟಿ- ಡಿಸಿಎಂ ಅಭಯ

0

ಡಾರೇಣುಕಾ ಪ್ರಸಾದ್‌ರವರು ಶಿಕ್ಷೆಗೊಳಗಾಗಿ ಆಸ್ಪತ್ರೆ ಸೇರಿದ ಬಳಿಕ ಅವರ ಉಸ್ತುವಾರಿಯ ಶಿಕ್ಷಣ ಸಂಸ್ಥೆಗಳ ಆಡಳಿತವನ್ನು ಎಒಎಲ್‌ಇ ಆಡಳಿತ ಮಂಡಳಿಯವರು ಸ್ವಾಾಧೀನ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಾರೆಂಬ ಹಿನ್ನಲೆಯಲ್ಲಿ ರೇಣುಕಾಪ್ರಸಾದರ ಉಸ್ತುವಾರಿಯ ಶಿಕ್ಷಣ ಸಂಸ್ಥೆಗಳ ಸಲಹಾ ಸಮಿತಿ ಸದಸ್ಯರುಗಳೆಲ್ಲ ಅ.12 ರಂದು ಸಭೆ ನಡೆಸಿ ಕೆವಿಜಿ ಕ್ಯಾಾಂಪಸ್ ಹಿತರಕ್ಷಣಾ ಸಮಿತಿಯನ್ನು ರಚಿಸಿಕೊಂಡರಲ್ಲದೆ, ಅಂದೇ ಅವರೆಲ್ಲ ಬೆಂಗಳೂರಿಗೆ ಹೋಗಿ ಅ.13 ರಂದು ಉಪಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್‌ರವರನ್ನು ಭೇಟಿಯಾದರು. ಡಾರೇಣುಕಾ ಪ್ರಸಾದ್‌ರ ಪುತ್ರಿ ಡಾಅಭಿಜ್ಞಾ, ಎನ್.ಎ.ರಾಮಚಂದ್ರ, ಭರತ್ ಮುಂಡೋಡಿ, ನಿತ್ಯಾನಂದ ಮುಂಡೋಡಿ, ಎಸ್.ಎನ್.ಮನ್ಮಥ, ಪಿ.ಸಿ.ಜಯರಾಮ್, ದಿನೇಶ್ ಮಡಪ್ಪಾಡಿ, ಎಸ್.ಸಂಶುದ್ದೀನ್, ಪಿ.ಎಸ್.ಗಂಗಾಧರ್, ದಯಾನಂದ ಕುರುಂಜಿ, ಸಂತೋಷ್ ಜಾಕೆ ಮೊದಲಾದವರು ಈ ನಿಯೋಗದಲ್ಲಿದ್ದರೆಂದು ತಿಳಿದುಬಂದಿದೆ.


ಅಲ್ಲಿ ಅವರು ಇಲ್ಲಿಯ ಘಟನೆಗಳನ್ನು ವಿವರಿಸಿದರೆಂದೂ, ಡಾರೇಣುಕಾ ಪ್ರಸಾದರು ಜಾಮೀನು ಪಡೆದು ಹೊರ ಬರುವವರೆಗೆ ಯಥಾಸ್ಥಿಿತಿ ಕಾಪಾಡಲು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಂಡಾಗ, ಡಿಕೆಶಿಯವರು ಭರವಸೆ ನೀಡಿ ಮಂಗಳೂರಿನ ಎಸ್.ಪಿ., ಡಿ.ಸಿ. ಹಾಗೂ ಆದಿಚುಂಚನಗಿರಿ ಸ್ವಾಾಮೀಜಿಯವರಿಗೆ ಫೋನ್ ಮೂಲಕ ಮಾತನಾಡಿದರೆಂದೂ ತಿಳಿದುಬಂದಿದೆ.


ಡಾಜ್ಯೋತಿ ರೇಣುಕಾಪ್ರಸಾದ್‌ರು ನೀಡಿದ್ದ ದೂರಿನ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಡಿಕೆಶಿಯವರು ಎಸ್.ಪಿ. ರಿಷ್ಯಂತ್‌ರಿಗೆ ಹೇಳಿದ ಹಿನ್ನಲೆಯಲ್ಲಿ ಸುಳ್ಯ ಪೊಲೀಸರು ತಕ್ಷಣವೇ ಕ್ಯಾಾಂಪಸ್‌ಗೆ ಹೋಗಿ ಮಹಜರು ನಡೆಸಿದರೆಂದು ತಿಳಿದುಬಂದಿದೆ.