ಎಡಮಂಗಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆರಂಭ

0

ಎಡಮಂಗಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವವು ಅ.15 ರಂದು ಆರಂಭವಾಗಿದೆ. ಸಂಜೆ ದೇವತಾ ಪ್ರಾರ್ಥನೆ ಬಳಿಕ ರಂಗ ಪೂಜೆ, ವಿಶೇಷ ರಂಗ ಪೂಜೆ, ದುರ್ಗಾ ಪೂಜೆ, ಹೂವಿನ ಪೂಜೆ, ವಿವಿಧ ಪೂಜಾ ಕಾರ್ಯಗಳು ನಡೆಯಿತು.

ಈ ಸಂದರ್ಭದಲ್ಲಿ ಶಿವದುರ್ಗ ಭಜನಾ ಮಂಡಳಿ ಮತ್ತು ಶಿವ ಪಾರ್ವತಿ ಭಜನಾ ಮಂಡಳಿಯಿಂದ ಕುಣಿತ ಭಜನೆ ಮತ್ತು ಭಜನೆ ನಡೆಯಿತು.