ಪಂಜ ದೇವಳದಲ್ಲಿ ನವರಾತ್ರಿ ಉತ್ಸವಭರತನಾಟ್ಯ ಕಲಾ ಸೇವೆ-ಭಜನಾ ಸಂಕೀರ್ತನೆ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಅ.15 ರಂದು ಆರಂಭ ಗೊಂಡಿದ್ದು ಅ.23 ತನಕ ಜರುಗಲಿದೆ.


ಅ.21.ರಂದು ರಾತ್ರಿ ಭಜನಾ ಸಂಕೀರ್ತನೆ, ಮಹಾಪೂಜೆ, ಪ್ರಸಾದ, ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ವಸುಧಾ ಬಿ ಮುಚ್ಚಿಲ ,ಸ್ತುತಿ ರೈ ಅಡ್ಠಬೈಲು ರವರಿಂದ ಭರತನಾಟ್ಯ ಕಲಾಸೇವೆ ನಡೆಯಿತು.ವ್ಯವಸ್ಥಾಪನಾ ಸಮಿತಿಯವರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

ಅ.22 ರಂದು ಸುಮಾ ಕೋಟೆ ರವರಿಂದ ಭಕ್ತಿ ಸಂಗೀತ.ಅ.23 ರಂದು ಕೃಷ್ಣ ಭಟ್ ಸಂಪ ರವರಿಂದ ಪುರಾಣ ವಾಚನ ಕಲಾ ಸೇವೆ ನಡೆಯಲಿದೆ. ಪ್ರತಿ ದಿನ ಸಂಜೆ ಗಂಟೆ 7 ರಿಂದ ವಿಶೇಷ ಪೂಜಾದಿಗಳು , ವಿಶೇಷ ಕಲಾಪ್ರಕಾರಗಳ ಸೇವೆಗಳು ಜರುಗಲಿದೆ.