p>

ಫುಟ್ ಪಾತ್ ತಡೆ ಬೇಲಿಗೆ ಡಿಕ್ಕಿ ಹೊಡೆದ ಕಾರು ಜಖಂ- ಹಾನಿ

0

ಸುಳ್ಯದ ಮುಖ್ಯ ರಸ್ತೆಯ ಕಟ್ಟೆಕ್ಕಾರ್ ಲಾಡ್ಜ್ ಬಳಿ ನಿನ್ನೆ ತಡರಾತ್ರಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಫುಟ್ ಪಾತ್ ತಡೆಬೇಲಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಮೈಸೂರು ಮೂಲದವರಾಗಿದ್ದು
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಯಾತ್ರೆ ಮುಗಿಸಿ ಹಿಂತಿರುಗುವ ವೇಳೆಯಲ್ಲಿ ಘಟನೆ ಸಂಭವಿಸಿದೆ. ಕಾರಿನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಕಾರಿನ ಮುಂಭಾಗ ಎಡಬದಿ ಜಖಂಗೊಂಡಿದೆ. ತಡೆ ಬೇಲಿಯ ಕಬ್ಬಿಣದ ರಾಡ್ ಗಳು ಕಿತ್ತು ಹೋಗಿದ್ದು ಹಾನಿಗೊಂಡಿದೆ. ಪೋಲಿಸರು ಆಗಮಿಸಿ ಕಾರನ್ನು ಟೋಯಿಂಗ್ ಮೂಲಕ ರಸ್ತೆಯಿಂದ ತೆರವುಗೊಳಿಸಿದರು.