ಆರ್ತಾಜೆ :ರಸ್ತೆಯಲ್ಲಿ ಕಸ ರಾಶಿ ಹಾಕುತ್ತಿರುವ ಕಿಡಿಗೇಡಿಗಳು, ಸ್ಥಳೀಯ ನಿವಾಸಿಗಳ ಆಕ್ರೋಶ

0

ಸುಳ್ಯ ಆರ್ತಾಜೆ ಸಮೀಪ ರಾತ್ರಿ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಕಸದ ರಾಶಿಗಳನ್ನು ತಂದು ರಸ್ತೆಯಲ್ಲಿ ಸುರಿಯುತ್ತಿದ್ದು ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಭಾಗದಲ್ಲಿ ಪಂಚಾಯತ್ ವತಿಯಿಂದ ಕಸದ ವಾಹನ ಬರುತ್ತಿದ್ದರು ಅದರ ಉಪಯೋಗವನ್ನು ಪಡಿಸಿಕೊಳ್ಳದೆ ಈ ರೀತಿಯಾಗಿ ಕಸದ ರಾಶಿಗಳನ್ನು ರಸ್ತೆಗೆ ಸುರಿದು ಅಮಾನವೀಯ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಸ್ಥಳೀಯ ನಿವಾಸಿಗಳು ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದಾರೆ.
ಈ ಕಸದ ರಾಶಿಯಲ್ಲಿ ಕೆಲವೊಂದು ಬಾರಿ ಕೋಳಿಯ ತ್ಯಾಜ್ಯಗಳು ಕಂಡು ಬರುತ್ತಿದ್ದು ಪರಿಸರ ದುರ್ನಾಥದಿಂದ ತುಂಬಿರುತ್ತದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಇತ್ತ ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.