ಅಜ್ಜಾವರ ಪ್ರೌಢಶಾಲಾ ವಿಧ್ಯಾರ್ಥಿ ದರ್ಶನ್ ಜಾವೆಲಿನ್ ಎಸೆತದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

0

ಅಜ್ಜಾವರ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ದರ್ಶನ್ ಅ.28 ಮತ್ತು 29ರಂದು ಸುಳ್ಯದ ಮಲ್ನಾಡು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 17ರ ವಯೋಮಿತಿಯ ಬಾಲಕರ ವಿಭಾಗದ ಜಾವೆಲಿನ್ ಎಸೆತದಲ್ಲಿ ಸ್ಪರ್ಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಅಜ್ಜಾವರ-ಮೇನಾಲದ ದಿನೇಶ್ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರ.

ಪ್ರೀತಮ್


ಹಾಗೂ 10 ನೇ ತರಗತಿ ವಿದ್ಯಾರ್ಥಿ ಪ್ರೀತಮ್ ಗುಂಡೆಸದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾನೆ. ಈತ ಅಜ್ಜಾವರ-ಕಲ್ತಡ್ಕದ ಪ್ರಭಾಕರ -ಗುಲಾಬಿ ದಂಪತಿಗಳ ಪುತ್ರ.