ಗಾಂಧಿನಗರ : ಬಾಲ್ಯ‌ ವಿವಾಹ ಮುಕ್ತ ಕರ್ನಾಟಕ ಜಾಗೃತಿ ಕಾರ್ಯಕ್ರಮ

0

ಕಾನೂನು ಸೇವೆಗಳ ಸಮಿತಿ ಸುಳ್ಯ ಮತ್ತು ವಕೀಲರ ಸಂಘ ಸುಳ್ಯ ಹಾಗೂ ಕೆ ಪಿ ಎಸ್ ಕಾಲೇಜು ಗಾಂಧಿನಗರ ಇವರ ಸಹಯೋಗದಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ-ಜಾಗೃತಿ ಕಾರ್ಯಕ್ರಮ ಅ.31 ರಂದು ಕೆ ಪಿ ಎಸ್ ಕಾಲೇಜು ಗಾಂಧಿನಗರದಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ -ಜಾಗೃತಿ ಕಾರ್ಯಕ್ರಮ ನಡೆಯಿತು.

ಸುಳ್ಯ ಹಿರಿಯ ವಿಭಾಗ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಬಾಬು ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಬಾಲ್ಯ ವಿವಾಹಕ್ಕೆ ಕಾರಣಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು. ಸುಳ್ಯ ವಕೀಲರ ಸಂಘದ ಕೋಶಾಧಿಕಾರಿ ಜಗದೀಶ್ ಡಿ ಪಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಕಾನೂನು ಮಾಹಿತಿ ನೀಡಿದರು.

ವಕೀಲರ ಅಧ್ಯಕ್ಷ ರಾದ ನಾರಾಯಣ ಕೆ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.ಸುಳ್ಯ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರಾದ ರಮೇಶ್ ಕುಮಾರ್ ಮತ್ತು ಆರೋನ್ ಡಿ ಸೋಜ ಇವರು ಅತಿಥಿಗಳಾಗಿ ಭಾಗವಹಿಸಿದ್ದರು.ಕೆ ಪಿ ಎಸ್ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಸಮಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.