ಸೋಮಪ್ರಕಾಶ್ ಪವಿತ್ರಮಜಲುರಿಗೆ ಹರಿಹರ ಪಲ್ಲತ್ತಡ್ಕದಲ್ಲಿ ಬೀಳ್ಕೊಡುಗೆ

0

ಕಳೆದ ಹಲವು ವರ್ಷಗಳಿಂದ ಹರಿಹರಪಲ್ಲತ್ತಡ್ಕದಲ್ಲಿ ಕ್ಯಾಂಪ್ಕೋ ಶಾಖೆಯ ಡೆಪ್ಯುಟಿ ಮೆನೇಜರ್ ಆಗಿ ಕಾರ್ಯ ನಿರ್ವಹಿಸಿದ್ದ ಸೋಮಪ್ರಕಾಶ್ ಪಿ.ಡಿ. ಪವಿತ್ರಮಜಲುರವರು ಅ.31 ರಂದು ಸೇವೆಯಿಂದ ನಿವೃತ್ತಿಗೊಂಡಿದ್ದು ಅವರಿಗೆ ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಗೌರವಿಸಿ ಬೀಳ್ಕೊಡಲಾಯಿತು.

ಸಂಘದ ಅಧ್ಯಕ್ಷ ಹರ್ಷಕುಮಾರ್ ದೇವಜನ, ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ, ಸುಧೀರ್ ಕೆ.ವಿ, ವಿನೂಪ್ ಮಲ್ಲಾರ, ಮೋನಪ್ಪ ಕೊಳಗೆ, ಹರ್ಷ ಮುಂಡಾಜೆ, ಜನಾರ್ದನ ಗುಂಡಿಹಿತ್ಲು, ಸೊಸೈಟಿ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.