ಮೃತ ಐಶ್ವರ್ಯರವರ ನೇತ್ರದಾನ : ಸಾರ್ಥಕತೆ ಮೆರೆದ ಪೋಷಕರು

0

ಬೆಂಗಳೂರಿನಲ್ಲಿ ಕಳೆದವಾರ ಆತ್ಮಹತ್ಯೆ ಮಾಡಿಕೊಂಡ ಶ್ರೀಮತಿ ಐಶ್ವರ್ಯಳ ಮನೆಯವರು ಆಕೆಯ ನೇತ್ರದಾನ ಮಾಡಿದ್ದು, ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿಯ ಪುತ್ರಿಯಾದ ಐಶ್ವರ್ಯ ಅ. ೨೬ರಂದು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೋಸ್ಟ್‌ಮಾರ್ಟಂ ವೇಳೆ ಪೋಷಕರ ಒಪ್ಪಿಗೆಯ ಮೇರೆಗೆ ಐಶ್ವರ್ಯ ಅವರ ಕಣ್ಣುಗಳನ್ನು ದಾನ ಮಾಡಲಾಯಿತು ಎಂದು ತಿಳಿದು ಬಂದಿದೆ.