ನ.19: ಪಂಜದಲ್ಲಿ ತಾಲೂಕು ಹಿರಿಯರ ಕ್ರೀಡಾಕೂಟ

0


🔼 ಸುಳ್ಯ,ಕಡಬ, ಪುತ್ತೂರು ತಾಲೂಕಿನ ಸ್ಪರ್ಧಿಗಳಿಗೆ ಅವಕಾಶ


ಸಂಘಟನಾ ಸಮಿತಿ, ಸುಳ್ಯ, ಕಡಬ, ಪುತ್ತೂರು ತಾಲೂಕುಗಳ ಹಿರಿಯರ 10ನೇ ಕ್ರೀಡಾಕೂಟ, ಸುಳ್ಯ ತಾಲೂಕು ಹಿರಿಯರ ಕ್ರೀಡಾ ಸಂಘ ಪಂಜ ಇದರ ವತಿಯಿಂದ ತಾಲೂಕು ಹಿರಿಯರ ಕ್ರೀಡಾಕೂಟ -2023
ನ.19 ರಂದು ಮುಂಜಾನೆ 6.45 ರಿಂದ ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ಜರುಗಲಿದೆ. 100 ಮೀ ಓಟ, 200 ಮೀ ಓಟ, 400 ಮೀ ಓಟ,800 ಮೀ ಓಟ,1500 ಮೀ ಓಟ,5000 ಮೀ ಓಟ,5000 ಮೀ (5ಕಿ.ಮೀ) ನಡಿಗೆ, ಗುಂಡೆಸೆತ, ಜವೆಲಿನ್, ಚಕ್ರ ಎಸೆತ, ಉದ್ದ ಜಿಗಿತ, ಟ್ರಿಪ್ಪಲ್ ಜಂಪ್ ಸ್ಪರ್ಧೆಗಳು ಜರುಗಲಿದೆ.30 ರಿಂದ 85 ವಯೋಮಾನದ ಪುರುಷ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
30 ರಿಂದ35 ರ ತನಕ,35ರಿಂದ 40ರ ತನಕ,40 ರಿಂದ 45 ರ ತನಕ,45 ರಿಂದ 50ರ ತನಕ,50 ರಿಂದ 55 ರ ತನಕ, 55 ರಿಂದ 60 ರ ತನಕ, 60 ರಿಂದ 65 ರ ತನಕ, 65 ರಿಂದ 70ರ ತನಕ, 70 ರಿಂದ 75 ರ ತನಕ, 75 ರಿಂದ 80 ರ ತನಕ, 80 ರಿಂದ 85ರ ತನಕ ವಯೋಮಿತಿಯಲ್ಲಿ ಸ್ಪರ್ಧಿಗಳನ್ನು ವಿಂಗಡಿಸಲಾಗುವುದು. ಈ ಗುಂಪುಗಳಲ್ಲಿ ಪುರುಷರು ಹಾಗೂ ಮಹಿಳೆಯರ ಪ್ರತ್ಯೇಕ ವಿಭಾಗ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.