ಅಮರಮುಡ್ನೂರು:ಪೈಲಾರು- ಮಾಡಬಾಕಿಲು ರಸ್ತೆ ಕಾಂಕ್ರೀಟ್ ಕಾಮಗಾರಿ ಪೂರ್ಣ

0

ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೈಲಾರು ಮಾಡಬಾಕಿಲು ಸಂಪರ್ಕ ರಸ್ತೆಯ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಅಣಿಯಾಗಿದೆ.


ಮಾಜಿ ಸಚಿವ ಎಸ್.ಅಂಗಾರ ರವರ ಶಿಫಾರಸ್ಸಿನ ಮೇರೆಗೆ
2022-23 ನೇ ಸಾಲಿನ ಮುಖ್ಯ ಮಂತ್ರಿಯವರ ವಿಶೇಷ ಅನುದಾನ ರೂ.30 ಲಕ್ಷ ಮಂಜೂರು ಗೊಂಡಿದ್ದು ಸುಮಾರು 470 ಮೀಟರ್ ರಸ್ತೆಯ ಕಾಂಕ್ರೀಟ್ ಕೆಲಸವನ್ನು ಕೆ.ಆರ್.ಐ.ಡಿ.ಎಲ್ ನವರು ನಿರ್ವಹಿಸಿರುತ್ತಾರೆ. ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು
ಕ್ಯೂರಿಂಗ್ ಆಗಬೇಕಾಗಿದ್ದು ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.