ಕೆಲಸದ ಜಾಗದ ಕುರಿತು ಬೇಕರಿ ಮಾಲಕರು ಮತ್ತು ಕೆಲಸದಾತನ ಮಧ್ಯೆ ತಕರಾರು

0


ಕೈಯಲ್ಲಿದ್ದ ಚಾಕು ಎಳೆದುಕೊಳ್ಳುವಾಗ ಕೈಗೆ ಗಾಯ


ಹುಡುಗಿಯರು ಕೆಲಸ ಮಾಡುವ ಸ್ಥಳದ ಬಳಿ ಹೋಗಿ ಕೆಲಸ ಮಾಡಬಾರದೆಂದು ಹೇಳಿದರೂ ಕೇಳಲಿಲ್ಲವೆಂಬ ಕಾರಣಕ್ಕಾಗಿ ಬೇಕರಿ ಮಾಲಕರೊಬ್ಬರು ತನ್ನ ಕೆಲಸದಾತನನ್ನು ಎಬ್ಬಿಸಿ ಆತನ ಕೈಯಲ್ಲಿದ್ದ ತರಕಾರಿ ತುಂಡರಿಸುವ ಚೂರಿಯನ್ನು ಎಳೆದುಕೊಳ್ಳುವಾಗ ಕೆಲಸದಾತನ ಕೈಗೆ ಗಾಯವಾದ ಘಟನೆ ವರದಿಯಾಗಿದೆ.


ಹುಡುಗಿಯರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಕೆಲಸದ ಯುವಕ ತರಕಾರಿ ತುಂಡರಿಸುವ ಕೆಲಸ ಮಾಡುತ್ತಿದ್ದನೆಂಬ ಕಾರಣಕ್ಕಾಗಿ ಬೇಕರಿ ಮಾಲಕ ಯಶವಂತ ಪಟ್ರಕೋಡಿಯವರು ಕೆಲಸದ ಯುವಕನನ್ನು ಅಲ್ಲಿಂದ ಎಬ್ಬಿಸಿ ಬೇರೆ ಕಡೆ ಕಳುಹಿಸಿದರೆನ್ನಲಾಗಿದೆ. ಆ ಸಂದರ್ಭ ಯುವಕನ ಕೈಯಲ್ಲಿದ್ದ ಚಾಕುವನ್ನು ಯಶವಂತರು ಎಳೆದುಕೊಂಡರೆನ್ನಲಾಗಿದೆ. ಆ ಸಂದರ್ಭ ಯುವಕನ ಕೈ ಬೆರಳುಗಳಿಗೆ ಗಾಯವಾಯಿತು.


ಅಲ್ಲಿಂದ ಬಂದ ಯುವಕ ಸರಕಾರಿ ಆಸ್ಪತ್ರೆಗೆ ಬಂದು ಕೈಯ ಗಾಯಕ್ಕೆ ಬ್ಯಾಂಡೇಜ್ ಮಾಡಿಕೊಂಡಿದ್ದು, ಪೊಲೀಸ್ ಠಾಣೆಗೆ ಇಂಟಿಮೇಶನ್ ಹೋಯಿತು. ಬಳಿಕ ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಸಿ ರಾಜಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸಲಾಯಿತೆಂದು ತಿಳಿದುಬಂದಿದೆ.