ಅಡ್ಕ- ಪಡ್ಡoಬೈಲ್ ಮೈದಾನದಲ್ಲಿ ಫ್ರೆಂಡ್‌ಶಿಪ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಮತ್ತು ಕ್ರೀಡಾಕೂಟ, ಸನ್ಮಾನ

0


ದೀಪಾವಳಿ ಪ್ರಯುಕ್ತ ಲೋಕೇಶ್ ಪಡ್ಡoಬೈಲ್ ರವರ ನೇತೃತ್ವದಲ್ಲಿ ಅಡ್ಕ- ಪಡ್ಡoಬೈಲ್ ಮೈದಾನದಲ್ಲಿ ನೆರವೇರಿತು. ಐದು ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು.


ಕ್ರಿಕೆಟ್ ಪಂದ್ಯಾಟವನ್ನು ರೂಪಾನಂದ ಕರ್ಲಪ್ಪಾಡಿ ಉದ್ಘಾಟಿಸಿ ಶುಭ ಹಾರೈಸಿದರು.


ಪಂದ್ಯಾಟದಲ್ಲಿ ಐದು ತಂಡಗಳು ಭಾಗವಹಿಸಿ ನ್ಯಾಯವಾದಿ ವಿಪುಲ್ ನೀರ್ಪಾಡಿ ಮಾಲಕತ್ವದ ವಾಸ್ತವ್ಯ ವಾರಿಯರ್ಸ್ ಪ್ರಥಮ ಟ್ರೊಫಿ ಪಡೆದುಕೊಂಡರೆ, ದ್ವಿತೀಯ ಟ್ರೊಫಿಯನ್ನು ರಮೇಶ್ ನಾಂಗುಳಿ ಮಾಲಕತ್ವದ ರಿಸಿಂಗ್ ಸ್ಟಾರ್ಸ್ ತಮ್ಮ ಮಡಿಲಿಗೆ ಹಾಕಿಕೊಂಡರು. ಅಶೋಕ್ ಪಡ್ಡoಬೈಲ್ ಮಾಲಕತ್ವದ ಫೇರ್ ಶೂಟರ್, ಪ್ರಜ್ವಲ್ ಮಾಲಕತ್ವದ ದಿ ಬಾಯ್ಸ್ ಕರ್ಲಪ್ಪಾಡಿ, ವಿನಯ್ ನಾರಲು ಮಾಲಕತ್ವದ ಶ್ರೀ ವಿಷ್ಣು ಕ್ರಿಕೆಟರ್ಸ್ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದರು. ಮಹಿಳೆಯರು, ಪುರುಷರು ಬಟ್ಟಲು ಓಟ, ಸಂಗೀತ ಕುರ್ಚಿ, ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸಿದರು.


ಸಂಜೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಇಂದ್ರನಾಥ ಕರ್ಲಪ್ಪಾಡಿ ನಿವೃತ್ತ ಮುಖ್ಯ ಗುರುಗಳು ಸಭಾ ಅಧ್ಯಕ್ಷತೆ ವಹಿಸಿ
ಮಾತಾಡಿದರು. ಗೌರವ ಉಪಸ್ಥಿತರಾಗಿ ರಾಮಚಂದ್ರ ಗೌಡ ಪಡ್ಡoಬೈಲ್, ಪುರುಷೋತ್ತಮ ಕರ್ಲಪ್ಪಾಡಿ, ಗುರುದತ್ ಕಾಂತಮಂಗಲ, ರವಿರಾಜ್ ಕರ್ಲಪ್ಪಾಡಿ, ದಿವ್ಯಾಜಯರಾಮ್, ದಿನೇಶ್ ನಾಂಗುಳಿ ಉಪಸ್ಥಿತರಿದ್ದರು.
ದೇಶ ಸೇವೆಗೈದು ಸೇವಾ ನಿವೃತ್ತಿ ಪಡೆದ ಕಿರಣ್ ಕುಮಾರ್ ಮುಡೂರ್ ಮತ್ತು ಲೋಕೇಶ್ ಶಾಂತಿಮಜಲು, ಕುದ್ಪಾಜೆ ಇವರನ್ನು ಸನ್ಮಾನಿಸಲಾಯಿತು. ರಾಜೇಶ್ ಬಂಗಾರಕೋಡಿ, ರಾಜ ಕುಡೆಕಲ್ಲು, ಚಂದ್ರಕಲಾ ಕರ್ಲಪ್ಪಾಡಿ ನಿರ್ಣಾಯಕರಾಗಿ ಮತ್ತು ಛಾಯಗ್ರಾಹಕರಾಗಿ ಪೃಥ್ವಿ ಪಡ್ಡoಬೈಲ್ ಮತ್ತು ಪ್ರಜ್ವಲ್ ಕರ್ಲಪ್ಪಾಡಿ ಸಹಕರಿದರು.
ದಿನೇಶ್ ನಾಂಗುಳಿ ಸ್ವಾಗತಿಸಿ ಪ್ರಾಸ್ತವಿಕ ಭಾಷಣ ನೆರವೇರಿಸಿದರೆ, ಬಾಲಕೃಷ್ಣ ಪಡ್ಡoಬೈಲ್ ಕಾರ್ಯಕ್ರಮ ನಿರೂಪಿಸಿದರು. ಲೋಕೇಶ್ ಪಡ್ಡoಬೈಲ್ ವಂದಿಸಿ ಶುಭ ಹಾರೈಸಿದರು.