ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗಜಲಕ್ಷ್ಮಿ ಯಶಸ್ವಿಗೆ ಪೂಜೆ

0


ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವಳದ ಗಜರಾಣಿ ಯಶಸ್ವಿಗೆ ಮಂಗಳವಾರ ಬಲಿಪಾಡ್ಯಮಿ ಪ್ರಯುಕ್ತ ಗಜಲಕ್ಷ್ಮಿ ಪೂಜೆಯು ನಡೆಯಿತು. ಕ್ಷೇತ್ರ ಪುರೋಹಿತ ವೇದಮೂರ್ತಿ ಮಧುಸೂದನ ಕಲ್ಲೂರಾಯ ಯಶಸ್ವಿಗೆ ವಿವಿಧ ವೈಧಿಕ ವಿದಿವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು.


ಅಲ್ಲದೆ ಆನೆಗೆ ಹಣ್ಣುಹಂಪಲು ತೆಂಗಿನಕಾಯಿ,ಅವಲಕ್ಕಿ, ಹೊದ್ಲು, ಬೆಲ್ಲ,ಹಣ್ಣು ಹಂಪಲು, ತೆಂಗಿನ ಕಾಯಿ ಇತ್ಯಾದಿ ತಿನಿಸುಗಳನ್ನು ನೀಡಿದರು. ನಂತರ ಗಜಲಕ್ಷ್ಮಿಗೆ ಮಂಗಳಾರತಿ ಬೆಳಗಿದರು. ಬಳಿಕ ಯಶಸ್ವಿಯು ತನ್ನ ಸೊಂಡಿಲಿನಿಂದ ಆಶೀರ್ವದಿಸಿತು.ಆರಂಭದಲ್ಲಿ ಯಶಸ್ವಿಯು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಪ್ರಣಾಮಗಳನ್ನು ಅರ್ಪಿಸಿತು.


ಈ ಮೊದಲು ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್ ಹಣ್ಣುಹಂಪಲು ನೀಡಿದರು.ಈ ಸಂದರ್ಭ ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಶ್ರೀ ದೇವಳದ ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.