ಆಲೆಟ್ಟಿಯಲ್ಲಿ ವಿ.ಹೆಚ್.ಪಿ ಬಜರಂಗದಳ ಶಿವ ಶಕ್ತಿ ಶಾಖೆಯ ವತಿಯಿಂದ ಪ್ರತಿಭಟನಾ ಸಭೆ

0

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯ ಶಿವ ಶಕ್ತಿ ಶಾಖೆ ಆಲೆಟ್ಟಿ ಇದರ ವತಿಯಿಂದ ಹಿಂದೂ ಸಂಘಟನೆಯ ಕಾರ್ಯಕರ್ತ ಲತೀಶ್ ಗುಂಡ್ಯ ಹಾಗೂ ಐದು ಮಂದಿಯನ್ನು ನೈತಿಕ ಪೋಲಿಸ್ ಗಿರಿ ಆರೋಪದಡಿಯಲ್ಲಿ ಗಡಿಪಾರು ಮಾಡುವಂತೆ ಆದೇಶಿಸಿರುವ ರಾಜ್ಯ ಸರಕಾರದ ವಿರುದ್ಧ
ನ.17 ರಂದು ಸಂಜೆ ಆಲೆಟ್ಟಿ ವಠಾರದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಮುಖಂಡ ರಾಜೇಶ್ ಶೆಟ್ಟಿ ಮೇನಾಲ ರವರು ಹಿಂದೂ ಕಾರ್ಯಕರ್ತರ ಮೇಲೆ ಸರಕಾರ ತೆಗೆದುಕೊಂಡಿರುವ ಧೋರಣೆಯನ್ನು ಹಿಂದೂ ಸಮಾಜ ಸಹಿಸುವುದಿಲ್ಲ. ಈ ರೀತಿಯ ದ್ವಂದ್ವ ನೀತಿಯನ್ನು ಹಿಂದೂ ಸಮಾಜ ಖಂಡಿಸುತ್ತದೆ ಎಂದು ಹೇಳಿದರು.
ವಿಶ್ವ ಹಿಂದು ಪರಿಷತ್ ಪ್ರಧಾನ ಕಾರ್ಯದರ್ಶಿ ನವೀನ್ಎಲಿಮಲೆ, ಬಜರಂಗದಳ ಸಹ ಸಂಯೋಜಕ ಸನತ್ ಚೊಕ್ಕಾಡಿ, ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ, ಪಂಚಾಯತ್ ಸದಸ್ಯ ಶಿವಾನಂದ ರಂಗತ್ತಮಲೆ, ಅಚ್ಚುತ ಮಣಿಯಾಣಿ ಆಲೆಟ್ಟಿ, ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ. ಶಿವ ಶಕ್ತಿ ಶಾಖೆಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ನಾರಾಯಣ ರೈ ಆಲೆಟ್ಟಿ, ಬಜರಂಗದಳ ಸಂಚಾಲಕ ಮಹೇಶ್ ಕುತ್ಯಾಳ ಹಾಗೂ ಗಡಿ ಪ್ರದೇಶದ ಕಲ್ಲಪಳ್ಳಿ , ಬಡ್ಡಡ್ಕ, ರಂಗತ್ತಮಲೆಯ ಹಿಂದೂ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡರು.