ಜಟ್ಟಿಪಳ್ಳದಲ್ಲಿ ಸಾರ್ವಜನಿಕ ಗೋಪೂಜೆ – ದೀಪಾವಳಿ ಆಚರಣೆ

0

ಸಾರ್ವಜನಿಕ ಗೋ ಪೂಜೆ ಮತ್ತು ದೀಪಾವಳಿ ಆಚರಣೆ ಶ್ರೀ ರಾಮ ಭಜನಾ ಸೇವಾ ಸಂಘ, ಕಪಿಲ ಯುವಕ ಮಂಡಲ, ಮಾನಸ ಮಹಿಳಾ ಮಂಡಲ ಇವುಗಳ ಜಂಟಿ ಆಶ್ರಯದಲ್ಲಿ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆ ಜಟ್ಟಿಪಳ್ಳ ಇಲ್ಲಿ ನಡೆಯಿತು.

ಮಾನಸ ಮಹಿಳಾ ಮಂಡಲದ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಆ ಬಳಿಕ ಗೋವಿಗೆ ಪೂಜೆಯನ್ನು ಮಹಿಳಾ ಮಂಡಲ ಮತ್ತು ಯುವಕ ಮಂಡಲದ ಸದಸ್ಯರು ನೆರವೇರಿಸಿಕೊಟ್ಟರು. ಗೋಪೂಜೆ ಕಾರ್ಯಕ್ರಮಕ್ಕೆ ದಿನಕರ ಕಾನತ್ತಿಲ ಇವರು ತಮ್ಮ ಗೋವುಗಳನ್ನು ತಂದು ಸಹಕಾರವನ್ನು ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ರಾಮ ಭಜನಾ ಸೇವಾ ಸಂಘದ ಪ್ರ. ಕಾರ್ಯದರ್ಶಿ ರಘುನಾಥ ಜಟ್ಟಿಪಳ್ಳ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ, ಕಪಿಲ ಯುವಕ ಮಂಡಲದ ಅಧ್ಯಕ್ಷ ಹರೀಶ್ ಜೆ.ಬಿ, ಮಹಿಳಾ ಮಂಡಲದ ಅಧ್ಯಕ್ಷರಾದ ಚಿತ್ರಾಲೇಖ ಮಡಪ್ಪಾಡಿ, ಗೌ. ಅಧ್ಯಕ್ಷೆ ಚಂದ್ರಾಕ್ಷಿ ಜೆ ರೈ, ಮತ್ತು ಯುವಕ ಮಂಡಲ , ಮಹಿಳಾ ಮಂಡಲ, ಭಜನಾ ಸೇವಾ ಸಂಘದ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರಘನಾಥ ಜಟ್ಟಿಪಳ್ಳ ಸ್ವಾಗತಿಸಿ ವಂದಸಿದರು.