ಕೊಡಿಯಾಲದ ಕಲ್ಪಡದಲ್ಲಿ ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ, ಸನ್ಮಾನ

0

ಕ್ರೀಡಾಕೂಟವು ಸರ್ವರ ಮನಸ್ಸನ್ನು ಬೆಳಗಿಸುವಂತಹ ಶಕ್ತಿ ಹೊಂದಿದೆ. ಊರಿನ ಸಮಸ್ತ ಜನರನ್ನು ಒಗ್ಗೂಡಿಸಿಕೊಂಡು, ಎಲ್ಲರ ಮನಸ್ಸುಗಳನ್ನು ಬೆಳಗಿಸಿ, ಜೊತೆಗೆ ಊರನ್ನು ಬೆಳಗಿಸುವಂತಹ ಕಾರ್ಯ ಕಲ್ಪಡ ಸ್ನೇಹಿತರ ಬಳಗದಿಂದ ಆಗುತ್ತಿರುವುದು ಶ್ಲಾಘನೀಯ ಎಂದು ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶಿಕ್ಷಕಿ ನಳಿನಾಕ್ಷಿ ಆಚಾರ್ಯ ಕಲ್ಮಡ್ಕ ಹೇಳಿದರು. ಅವರು ಕಲ್ಪಡ ಕೊಡಿಯಾಲ ಸ್ನೇಹಿತರ ಬಳಗದ ವತಿಯಿಂದ ಕಲ್ಪಡ ಮೂವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನ ೧೯ರಂದು ನಡೆದ ದೀಪಾವಳಿ ಹಬ್ಬದ ಪ್ರಯುಕ್ತ ೭ನೇ ವರ್ಷದ ಸಾಮೂಹಿಕ ಕ್ರೀಡಾಕೂಟ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದರು. ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಬದಲು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಹೆಚ್ಚಾಗುತ್ತಿದೆ. ಸಂಸ್ಕೃತಿಯೊಂದಿಗೆ ಮನಸುಷ್ಯನಲ್ಲಿ ಇರಬೇಕಾದ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿದೆ. ಹಿರಿಯರ ಪ್ರತಿಯೊಂದು ಕೆಲಸವನ್ನೂ ಮಕ್ಕಳು ಅನುಕರಣೆ ಮಾಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾರಯುತ ಬದುಕು ಕಂಡುಕೊಳ್ಳಲು ಪೋಷಕರ ಪಾತ್ರ ಅಗತ್ಯವಾಗಿರುತ್ತದೆ ಎಂದವರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಸಿಕ್ಕಾಗ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಿಯಾಲ ಸ್ನೇಹಿತರ ಬಳಗದ ಅಧ್ಯಕ್ಷ ಯುವರಾಜ್ ಕಲ್ಪಡ ಇಪ್ಪುಳ್ತಡಿ ವಹಿಸಿದ್ದರು. ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಬೆಳ್ಳಾರೆ ವಲಯದ ಮೇಲ್ವೀಚಾರಕ ಗೋಪಾಲಕೃಷ್ಣ, ಮೂವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ನಿರ್ಮಲ ಕೆ.ಎಸ್, ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿಯ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ, ಕೊಡಿಯಾಲ ಸ್ನೇಹಿತರ ಬಳಗದ ಗೌರವಾಧ್ಯಕ್ಷ ಶಿವರಾಮ ಉಪಾಧ್ಯಾಯ ಕಲ್ಪಡ ಮಾಲ್ಯತ್ತಾರು ಶುಭಹಾರೈಸಿದರು. ಸ್ನೇಹಿತರ ಬಳಗದ ಕಾರ್ಯದರ್ಶಿ ಲೋಕೇಶ್ ಕೆ.ವಿ ಕಲ್ಪಡ, ಉಪಾಧ್ಯಕ್ಷ ಗಿರೀಶ್ ಕೆ, ಸಂಘಟನಾ ಕಾರ್ಯದರ್ಶಿ ದಯಾನಂದ ಕಲ್ಪಡಗುತ್ತು, ಕೋಶಾಧಿಕಾರಿ ಜಗದೀಶ್ ಕಲ್ಪಡ, ಜತೆ ಕಾರ್ಯದರ್ಶಿ ದೀಕ್ಷಿತ್ ಕುಕ್ಕುತ್ತಡಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶ್ವೇತಾ, ಸುಚೇತಾ, ಗಣೇಶ್ ಅಂಗಾರಡ್ಕ, ಸುರೇಶ್ ಗುತ್ತು, ಅನ್ವಿತ್ ಕಲ್ಪಡ, ಲೋಕೆಶ್ ಕೆ.ವಿ, ಬಾಲಕೃಷ್ಣ ಎಸ್, ದೀಕ್ಷಿತ್ ಕುಕ್ಕುತ್ತಡಿ, ವಸಚಿತರವರು ಅತಿಥಿಗಳಿಗೆ ತಾಂಬೂಲ ನೀಡಿ ಗೌರವಿಸಿದರು. ಸದಸ್ಯ ಕೇಶವ ಕಲ್ಪಡ ತೋಟ ಸ್ವಾಗತಿಸಿ, ಕೋಶಾಧಿಕಾರಿ ಜಗದೀಶ್ ಕಲ್ಪಡ ಅಭಿನಂದನಾ ಪತ್ರ ವಾಚಿಸಿ, ವಂದಿಸಿದರು. ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಉದ್ಘಾಟನಾ ಸಮಾರಂಭ: ಬೆಳಿಗ್ಗೆ ನಡೆದ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ವೆಂಕಪ್ಪ ಗೌಡ ಕಲ್ಪಡ ಇಪ್ಪುಳ್ತಡಿ ಉದ್ಘಾಟಿಸಿದರು. ಕೊಡಿಯಾಲ ಸ್ನೇಹಿತರ ಬಳಗದ ಅಧ್ಯಕ್ಷ ಯುವರಾಜ್ ಕಲ್ಪಡ ಇಪ್ಪುಳ್ತಡಿ ಅಧ್ಯಕ್ಷತೆ ವಹಿಸಿದ್ದರು. ಕಲ್ಪಡ, ಕೊಡಿಯಾಲ ಸ್ನೇಹಿತರ ಬಳಗದ ಗೌರವಾಧ್ಯಕ್ಷ ಶಿವರಾಮ ಉಪಾಧ್ಯಾಯ ಕಲ್ಪಡ ಮಾಲ್ಯತ್ತಾರು, ಮೂವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷö್ಮಣ ಗೌಡ ಕಣಿಲೆಗುಂಡಿ, ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಅನಿಲ, ಪೂವಪ್ಪೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮೋಹಿನಿ ಮಾಳ ಉಪಸ್ಥಿತರಿದ್ದರು. ಬಳಗದ ಸ್ಥಾಪಕಾಧ್ಯಕ್ಷ ಪ್ರಸಾದ್ ಕಲ್ಪಡ ಸ್ವಾಗತಿಸಿ, ಕಾರ್ಯದರ್ಶಿ ಲೋಕೇಶ್ ಕೆ.ವಿ ಕಲ್ಪಡ ವಂದಿಸಿದರು. ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ, ಪ್ರತಿಭಾ ಪುರಸ್ಕಾರ: ಭಾರತೀಯ ಸೇನೆಯ ನಿವೃತ್ತ ಯೋಧ ಗಿರಿಧರ್ ಕೆ.ಕಡೀರ, ಆಶಾಕಾರ್ಯಕರ್ತೆಯರಾದ ರಾಜೀವಿ ನಾಯಕ್, ಚಂದ್ರಾವತಿ ಕಲ್ಲಗದ್ದೆ ಇವರನ್ನು ಸನ್ಮಾನಿಸಲಾಯಿತು. ೨೦೨೨-೨೩ನೇ ಸಾಲಿನ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ಯಶೋದ ಕಣಿಲೆಗುಂಡಿ, ೨೦೨೨-೨೩ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಭವಿಷ್ಯ ಇವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.