ಗಾಂಧಿನಗರ ಹೈವೇ ಚಿಕನ್ ಸೆಂಟರ್ ನಲ್ಲಿ ಮಾರಾಟಕ್ಕೆ ಬಂದ ಕೋಳಿಗಳಲ್ಲಿ ಒಂದು ಕೋಳಿಗೆ 4 ಕಾಲುಗಳು

0

ಸುಳ್ಯ ಗಾಂಧಿನಗರ ಹೈವೇ ಚಿಕ್ಕನ್ ಸ್ಟಾಲಿನಲ್ಲಿ ಮಾರಾಟಕ್ಕೆ ಬಂದ ಕೋಳಿಗಳಲ್ಲಿ ನಾಲ್ಕು ಕಾಲುಗಳು ಇರುವ ಒಂದು ಕೋಳಿ ಕಂಡು ಬಂದಿದೆ.ನವಂಬರ್ 21ರಂದು ಮೈಸೂರಿನಿಂದ ಶೀತಲ್ ಚಿಕನ್ ಸೆಂಟರಿನವರು ಸುಳ್ಯಕ್ಕೆ ಮಾರಾಟಕ್ಕೆ ತಂದಿರುವ ಕೋಳಿಗಳಲ್ಲಿ ಈ ಒಂದು ಕೋಳಿ ಕಂಡುಬಂದಿದ್ದು ಅಂಗಡಿಯವರಲ್ಲಿ ವಿಸ್ಮಯ ಮೂಡಿಸಿದೆ. ನಾಲ್ಕು ಕಾಲುಗಳಲ್ಲಿ ಯಾವುದೇ ಕೊರತೆ ಇಲ್ಲದೆ ಸಮಾನವಾಗಿದ್ದು ಯಾವುದೇ ವ್ಯತ್ಯಾಸಗಳು ಕಂಡುಬರುತ್ತಿಲ್ಲ.

ಇದೀಗ ಅಂಗಡಿಯವರು ಅ ಕೋಳಿಯನ್ನು ಮಾರಾಟ ಮಾಡದೆ ಅಂಗಡಿಯಲ್ಲಿ ಇರಿಸಿಕೊಂಡಿದ್ದಾರೆ. ಸಾಧಾರಣವಾಗಿ ಕೋಳಿಗಳು ಬರುವಾಗ ಸೆಂಟರ್ ನವರು ತಮ್ಮ ಅಂಗಡಿಗೆ ಬೇಕಾದಷ್ಟು ಕೋಳಿಗಳನ್ನು ಇಳಿಸಿಕೊಳ್ಳುತ್ತಾರೆ. ಕೋಳಿ ಕೊಟ್ಟವರು ತೆರಳಿದ ಬಳಿಕ ಅಂಗಡಿಯವರಿಗೆ ಒಂದು ಕೋಳಿಯಲ್ಲಿ ನಾಲ್ಕು ಕಾಲು ಇರುವ ಬಗ್ಗೆ ಗಮನಿಸಿದ್ದಾರೆ. ಇದೀಗ ಕೋಳಿಗೆ ನಾಲ್ಕು ಕಾಲು ಇರುವ ವಿಷಯ ತಿಳಿದ ಸ್ಥಳೀಯರು ಈ ವಿಶೇಷ ಕೋಳಿಯನ್ನು ನೋಡಲು ಬರುತ್ತಿದ್ದಾರೆ.