ಕೊಲ್ಲಮೊಗ್ರು ಗ್ರಾ.ಪಂ ಗ್ರಾಮ ಸಭೆ

0

ಕೊಲ್ಲಮೊಗ್ರು ಗ್ರಾ.ಪಂ ನ ಗ್ರಾಮ ಸಭೆ ನ.22 ರಂದು ಮಯೂರ ಕಲಾ ಮಂದಿರ ಕೊಲ್ಲಮೊಗ್ರು ಇಲ್ಲಿ ನಡೆಯಿತು.


ಗ್ರಾ.ಪಂ ಅಧ್ಯಕ್ಷೆ ಜಯಶ್ರೀ ಚಾಂತಾಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಅಶ್ವಥ್ ಯಲದಾಳು, ಗ್ರಾ.ಪಂ ಸದಸ್ಯರುಗಳಾದ ಮಾದವ ಚಾಂತಾಲ, ಪುಷ್ಪರಾಜ ಪಡ್ಪು, ಶ್ರೀಮತಿ ಮೋಹಿನಿ ಕಟ್ಟ, ಶ್ರೀಮತಿ ಶಿವಮ್ಮ ಉಪಸ್ಥಿತರಿದ್ದರು.ಸಮಾಜಿಕ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಶೈಲಜಾ ನೋಡೆಲ್ ಅಧಿಕಾರಿಯಾಗಿದ್ದರು.

ಗ್ರಾಮ ಸಭೆಯಲ್ಲಿ ಜಲ ಜೀವನ್ ಮಿಷನ್ ಯೋಜನೆ, ಮಿತ್ತೋಡಿ ಅಪೂರ್ಣ ಕಾಮಗಾರಿ, ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಬಹುವಾಗಿ ಚರ್ಚೆಯಾಯಿತು. ಇಲಾಖಾ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿದ್ಯಾಧರ ಕೆ.ಎಸ್ ಸ್ವಾಗತಿಸಿ, ಸಿಬ್ಬಂದಿ ವಸಂತ ವರದಿ ವಾಚಿಸಿದರು. ಪುಷ್ಪರಾಜ್ ಪಡ್ಪು ವಂದಿಸಿದರು.