ಸುಬ್ರಹ್ಮಣ್ಯ: ಕುಲ್ಕುಂದ ಜಾನುವಾರು ಜಾತ್ರಾ ಪ್ರಯುಕ್ತ ಗೋಪೂಜೆ

0

ಕಾರ್ತಿಕ ಹುಣ್ಣಿಮೆ ದಿನವಾದ ಇಂದು ಕುಲ್ಕುಂದ ಜಾನುವಾರು ಜಾತ್ರೆಯ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದೊಂದಿಗೆ ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ ಸಾಂಕೇತಿಕವಾಗಿ ನಡೆಯಿತು.

ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗಿರಿಧರ ಸ್ಕಂದ, ಬಸವೇಶ್ವರ ದೇವಸ್ಥಾನದ ಅರ್ಚಕರಾದ ಗಣೇಶ್ ದೀಕ್ಷಿತ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರು, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವನಜ ಭಟ್, ಶೋಭಾ ಗಿರಿಧರ , ಮನೋಜ್ ,ಶ್ರೀಕುಮಾರ್, ರವಿ ಶೆಟ್ಟಿ ಕುಲ್ಕುಂದ, ರಾಜೇಶ್ ಕುಲ್ಕುಂದ, ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಂದ್ರ ಶೇಖರ, ಕಿರಣ್ ಟೈಲರ್, ಲೋಕೇಶ್, ಗಿರೀಶ್ ಆಚಾರ್ಯ,ಗುಡ್ಡಪ್ಪ ಗೌಡ, ವಿಕಾಸ್ ,ಆಡಳಿತ ಮಂಡಳಿಯ ಸದಸ್ಯರು ಊರಿನವರು ಭಕ್ತಾದಿಗಳು ಉಪಸ್ಥಿತರಿದ್ದರು.