ಬ್ಯಾಡ್ಮಿಂಟನ್ ಪ್ರಿಮಿಯರ್ ಲೀಗ್ ನಲ್ಲಿ ಚಾಂಪಿಯನ್ ಆದ ಜನತಾ ಗ್ರೂಪ್ಸ್ ಸಹೋದರರು

0

ಒಂದು ಲಕ್ಷ ಇಪ್ಪತ್ತೈದು ಸಾವಿರ ಬಹುಮಾನ ಗೆದ್ದ ಸುಳ್ಯದ ಆಟಗಾರರು

ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಮಂಗಳೂರು ಇದರ ಆಶ್ರಯದಲ್ಲಿ ಯು ಎಸ್ ಮಲ್ಯ ಇಂಡೋರ್ ನಲ್ಲಿ ನಡೆದ ಯುನೈಟೆಡ್ ಪ್ರಿಮಿಯರ್ ಲೀಗ್ ಸೀಸನ್ ಎರಡರ ವಿಜಯಗಳಾಗಿ ಸುಳ್ಯ ಜನತಾ ಗ್ರೂಪ್ಸ್ ರಿಜ್ಜಾನ್ ಅಹ್ಮದ್, ಸಪ್ವಾನ್ ಅಹ್ಮದ್ ಮತ್ತು ಸಿರಾಜುದ್ದೀನ್ ರವರನ್ನೊಳಗೊಂಡ ಸುಳ್ಯ ತಂಡ ವಿಜಯಿಯಾಗಿ ಒಂದು ಲಕ್ಷದ ಇಪ್ಪತ್ತೈದು ಸಾವಿರ ಬಹುಮಾನ ಪಡೆದುಕೊಂಡಿದ್ದಾರೆ. ಸುಳ್ಯದ ಪ್ರತಿಭಾನ್ವಿತ ಆಟಗಾರ ರಿಜ್ವಾನ್ ಅಹ್ಮದ್ ಜನತಾ ನೇತೃತ್ವದ ಬ್ಯಾಡ್ಮಿಂಟನ್ ತಂಡ ಈ ಹಿಂದೆ ಹಲವಾರು ಪ್ರಿಮಿಯರ್ ಲೀಗ್ ಪಂದ್ಯಾಟದಲ್ಲಿ ಪ್ರಶಸ್ತಿ ಪಾತ್ರರಾಗಿದ್ದಾರೆ.