ಡಿ. 17ರಿಂದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ, ಪೂರ್ವಭಾವಿ ಸಭೆ

0

ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತವ ಡಿ. 17ರಿಂದ 21ರ ತನಕ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ಡಿ. 1ರಂದು ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆದ್ಲ ನರಸಿಂಹ ಭಟ್ಟ, ಧರ್ಮದರ್ಶಿ, ಗೌರವ ಪ್ರಧಾನ ಅರ್ಚಕ ವಾರಣಾಶಿ ಗೋಪಾಲಕೃಷ್ಣ, ಧರ್ಮದರ್ಶಿ ಸೀತಾರಾಮ ಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಕ್ತಾದಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಸೂಕ್ತ ಸಲಹೆಗಳನ್ನು ನೀಡಿದರು.