ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಸುಳ್ಯ ರೋಟರಿ ಕ್ಲಬ್ ವತಿಯಿಂದ ಇಂಟರ್ ಲಾಕ್ ಅಳವಡಿಕೆಗೆ ಗುದ್ದಲಿ ಪೂಜೆ

0

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಮುಖ್ಯ ರಸ್ತೆಯಿಂದ ಸಂಪರ್ಕಿಸುವಲ್ಲಿ ಸುಳ್ಯ ರೋಟರಿ ಕ್ಲಬ್ ವತಿಯಿಂದ ಇಂಟರ್ ಲಾಕ್ ಅಳವಡಿಸಲು ಗುದ್ದಲಿ ಪೂಜೆಯು ಡಿ.2 ರಂದು ನಡೆಯಿತು.
ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ಗುದ್ದಲಿ ಪೂಜೆ ನೆರವೇರಿಸಿ ಶುಭಹಾರೈಸಿದರು.


ಬಳಿಕ ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ಮಾತನಾಡಿ ದೇವಸ್ಥಾನದಲ್ಲಿ ನಡೆಯುವ ಅಭಿವೃದ್ದಿ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.


ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ರೋ.ಸೀತಾರಾಮ ರೈ ಸವಣೂರು, ಜೀರ್ಣೋದ್ದಾರ ಸಮಿತಿ ಸದಸ್ಯರಾದ ಎಂ.ಮೀನಾಕ್ಷಿ ಗೌಡ, ರೋ.ರಾಮಚಂದ್ರ ಪಿ.ಉಪಸ್ಥಿತರಿದ್ದರು.
ರೋ.ಅಧ್ಯಕ್ಷ ಆನಂದ ಖಂಡಿಗ ಸ್ವಾಗತಿಸಿದರು.


ಗುದ್ದಲಿ ಪೂಜೆಯ ಮೊದಲು ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಸದಸ್ಯ ಎನ್.ಜಯಪ್ರಕಾಶ್ ರೈ, ರೋಟರಿ ಕ್ಲಬ್ ಕಾರ್ಯದರ್ಶಿ ಕಸ್ತೂರಿ ಶಂಕರ್, ರೋ.ಪ್ರಭಾಕರ ನಾಯರ್,ರೊ.ಚಂದ್ರಶೇಖರ ಪೇರಾಲು,ರೊ.ಮಧುಸೂದನ್ ಕುಂಭಕ್ಕೋಡು,ರೊ.ಲತಾ ಮಧುಸೂದನ್, ರೊ.ಪ್ರಭಾಕರ ನಾಯರ್,ರೊ.ಜಗದೀಶ್ ಎ.ಎಸ್. ರೊ.ಡಾ.ಸದಾಶಿವ ರಾವ್, ರೊ.ಸುಬ್ರಾಯ ಭಟ್ ದಳ, ರೊ.ದಯಾನಂದ ಆಳ್ವ, ಕೃಪಾಶಂಕರ ತುದಿಯಡ್ಕ ,ಕಮಲಾಕ್ಷಿ ಟೀಚರ್,ಇಂಜಿನಿಯರ್ ವಿಜಯ ಕುಮಾರ್ ತುದಿಯಡ್ಕ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು.